
ಕೇಂದ್ರ ಸರ್ಕಾರ vs ಉಪರಾಷ್ಟ್ರಪತಿ ಬೆಂಕಿ ಹೊತ್ತಿಕೊಂಡಿದ್ದೇಗೆ? ರಾಜೀನಾಮೆ ನೀಡಲು ಹಿಂದಿರುವ ಕಾರಣವೇನು?
ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರ ರಾಜೀನಾಮೆಯಿಂದ ಸಂಸತ್ತಿನಲ್ಲಿ ಕೋಲಾಹಲ. ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜೀನಾಮೆಗೆ ಕಾರಣ ತಿಳಿಸುವಂತೆ ಒತ್ತಾಯಿಸಿವೆ. ಖರ್ಗೆ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು (ಜು.24): ಉಪರಾಷ್ಟ್ರಪತಿ ರಾಜೀನಾಮೆ ಸಂಸತ್‌ನಲ್ಲಿ ಕೋಲಾಹಲ ಎಬ್ಬಿಸಿದೆ. ಜಗದೀಪ್ ಧನ್‌ಕರ್ ರಾಜೀನಾಮೆ ಪ್ರಶ್ನಿಸಿ ವಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿದೆ. ಎರಡು ಸದನದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ರಾಜೀನಾಮೆ ಏಕೆ ಎಂದು ಸರ್ಕಾರ ಉತ್ತರ ನೀಡಲಿ ಎಂದ ಖರ್ಗೆ ಹೇಳಿದ್ದರೆ, ಅವರಿಗೆ ವಿದಾಯ ಕಾರ್ಯಕ್ರಮ ಏಕೆ ನಿಗದಿ ಮಾಡಿಲ್ಲ ಎಂದು ಅಖಿಲೇಶ್ ಯಾದವ್ ಪ್ರಶ್ನೆ ಮಾಡಿದ್ದಾರೆ.
ಧನಕರ್ ಏಕೆ ರಾಜೀನಾಮೆ ನೀಡಿದರು ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು? ರಾಜೀನಾಮೆ ನೀಡಲು ಹಿಂದಿರುವ ಕಾರಣವೇನು? ನಮಗೆ ದಾಲ್ ಮೇ ಕುಚ್ ಕಾಲಾ ಹೈ ಅನಿಸುತ್ತಿದೆ. ನೋಡಿ ಧನಕರ್ ಆರೋಗ್ಯವೂ ಚೆನ್ನಾಗಿಯೇ ಇದೆ. ಯಾವಾಗಲೂ ತಮ್ಮ ಶಬ್ಧಕೋಶ ಚೆನ್ನಾಗಿಯೇ ಇಟ್ಟುಕೊಂಡಿದ್ದರು. ನೋಡಿ ಧನಕರ್, ಆರ್ಎಸ್ಎಸ್ ಬಿಜೆಪಿ ಇಷ್ಟು ಸಮರ್ಥನೆ ಮಾಡುತ್ತಿದ್ದರು. ಬಿಜೆಪಿ, ಆರ್ಎಸ್ಎಸ್ ಜತೆ ಧನಕರ್ ನಿಷ್ಠೆ ಹೊಂದಿದ್ದರು ಎಂದು ಖರ್ಗೆ ಹೇಳಿದ್ದಾರೆ.