ಫಲಿಸಿತು ಹಿಂದೂಗಳ ಪ್ರಾರ್ಥನೆ, ಗ್ಯಾನವಾಪಿ ಮಸೀದಿ ಒಳಗಿನ ದೇವರ ಪೂಜೆಗೆ ಅವಕಾಶ!

1993ರ ವರೆಗೆ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಹಿಂದೂ ಮೂರ್ತಿಗಳ ಪೂಜೆಗೆ ಅವಕಾಶ ನೀಡಲಾಗಿತ್ತು. ಬಳಿಕ ರಾಜಕೀಯ ಮೇಲಾಟ ಸೇರಿದಂತೆ ಹಲವು ಕಾರಣಗಳಿಂದ ಪೂಜೆಗೆ ಅವಕಾಶ ನಿರಾಕರಿಸಲಾಗಿತ್ತು. ಇದೀಗ 3 ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಗ್ಯಾನವಾಪಿ, ಹೇಮಂತ್ ಸೊರೆನ್ ಬಂಧನ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

First Published Jan 31, 2024, 10:52 PM IST | Last Updated Jan 31, 2024, 10:52 PM IST

ಹಿಂದೂಗಳ ಶ್ರದ್ಧಾಕೇಂದ್ರ, ಭಾರತದ ಅತ್ಯಂತ ಪುರಾತನ ನಗರ, ಪುರಾತನ ಧಾರ್ಮಿಕ ಕೇಂದ್ರ ಕಾಶಿ ವಿಶ್ವನಾಥ ಮಂದಿರದ ಮೇಲೆ ನಡೆದ ದಾಳಿಗಳು ಒಂದೆರಡಲ್ಲ. ಆದರೆ ಸ್ವತಂತ್ರ ಭಾರತದಲ್ಲೂ ಈ ದೇಗುಲವನ್ನು ಹಿಂದೂಗಳಿಂದ ದೂರವಿಡುವ ಹುನ್ನಾರ ನಡೆದಿತ್ತು ಅನ್ನೋದು ಕಟು ಸತ್ಯ. ಇದೀಗ ಕೋಟ್ಯಾಂತರ ಹಿಂದುಗಳ ಪಾರ್ಥನೆ ಫಲಿಸಿದೆ. ವಿಶ್ವನಾಥನ ಮೂಲ ದೇವಸ್ಥಾನದ ಮೇಲೆ ನಿಂತಿರುವ ಗ್ಯಾನವಾಪಿ ಮಸೀದಿ ಆವರಣದಲ್ಲಿರುವ ಹಿಂದೂ ಮೂರ್ತಿಗಳ ಪೂಜೆಗೆ ವಾರಣಾಸಿ ಕೋರ್ಟ್ ಅವಕಾಶ ನೀಡಿದೆ. 1993ರ ಬಳಿಕ ಪೂಜೆಗೆ ಅವಕಾಶ ನಿರಾಕರಿಸಲಾಗಿತ್ತು. ಇದೀಗ ಕಾನೂನು ಹೋರಾಟದಲ್ಲಿ ಹಿಂದೂಗಳಿಗೆ ಗೆಲುವಾಗಿದೆ.