News Hour: ಸುರಂಗದಿಂದ ಸಾವನ್ನು ಗೆದ್ದ ಬಂದ 41 ಕಾರ್ಮಿಕರು

17 ದಿನಗಳ ಕಾಲ ಸುರಂಗದಲ್ಲಿ ಕಾಲ ಕಳೆದಿದ್ದ 41 ಕಾರ್ಮಿಕರು, ಮಂಗಳವಾರ ಸಿಲ್‌ಕ್ಯಾರಾ ಸುರಂಗದಿಂದ ಯಶಸ್ವಿಯಾಗಿ ಹೊರಬಂದಿದ್ದಾರೆ, 398 ಗಂಟೆಗಳ ಕಾಲ ರಕ್ಷಣಾ ಕಾರ್ಆಚರಣೆ ನಡೆದಿತ್ತು.
 

Share this Video
  • FB
  • Linkdin
  • Whatsapp

ನವದೆಹಲಿ (ನ.28): ಬರೋಬ್ಬರಿ 17 ದಿನಗಳ ಕಾಲ ಸಿಲ್‌ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಮಂಗಳವಾರ ಯಶಸ್ವಿಯಾಗಿ ರಕ್ಷಿಸಲಾಗಿದೆ. 398 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಮೊದಲ ಕಾರ್ಮಿಕ ಹೊರಬಂದಾಗ ಅಂತ್ಯ ಕಂಡಿತು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಈ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಸಂಭ್ರಮ ಪಟ್ಟಿದ್ದಾರೆ. ಸುರಂಗದಿಂದ ಕಾರ್ಮಿಕರನ್ನು ಹೊರತರಲು ಮಾಡಲಾಗಿದ್ದ ರಂಧ್ರದಕ್ಕೆ ನುಗ್ಗಿಸಿದ ಪೈಪ್‌ನಿಂದ ಕಾರ್ಮಿಕರು ಹೊರಬಂದಾಗ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್‌ ಹಾರ ಹಾಕಿ ಅವರನ್ನು ಸ್ವಾಗತಿಸಿದರು.

ಟೀಮ್‌ ವರ್ಕ್‌ನ ಶ್ರೇಷ್ಠ ಉದಾಹರಣೆ, ಸಿಲ್‌ಕ್ಯಾರಾ ಸುರಂಗ ಯಶಸ್ವಿ ಕಾರ್ಯಾಚರಣೆಗೆ ಮೋದಿ ಸಂತಸ!

ಎಲ್ಲರಲ್ಲೂ ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮುಂದಿನ 24 ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುವುದು ಎಂದು ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ. ಅದರೊಂದಿಗೆ ಎಲ್ಲಾ ಕಾರ್ಮಿಕರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

Related Video