Asianet Suvarna News Asianet Suvarna News

5 States Election: ಮತ್ತೆ ಬಿಜೆಪಿ ಕೈವಶ ಆಗುತ್ತಾ ಹಿಂದೂ ಅಸ್ಮಿತೆ ಅಯೋಧ್ಯೆ.?

ದೇಶದ ಅತಿಹೆಚ್ಚು ವಿಧಾನಸಭೆ ಒಳಗೊಂಡ ಮತ್ತು 2023ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಉತ್ತರಪ್ರದೇಶದಲ್ಲಿ (Uttar Pradesh) ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು 213-231 ಕ್ಷೇತ್ರಗಳಲ್ಲಿ ಜಯ ಸಾಧಿಸಿ, ಸರ್ಕಾರ ರಚನೆ ಮಾಡಲಿದೆ ಎಂದು ಟೈಮ್ಸ್‌ ನೌ ಸಮೀಕ್ಷೆ ಭವಿಷ್ಯ ನುಡಿದಿದೆ. 

 

ನವದೆಹಲಿ (ಜ. 30): ದೇಶದ ಅತಿಹೆಚ್ಚು ವಿಧಾನಸಭೆ ಒಳಗೊಂಡ ಮತ್ತು 2023ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಉತ್ತರಪ್ರದೇಶದಲ್ಲಿ (Uttar Pradesh) ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು 213-231 ಕ್ಷೇತ್ರಗಳಲ್ಲಿ ಜಯ ಸಾಧಿಸಿ, ಸರ್ಕಾರ ರಚನೆ ಮಾಡಲಿದೆ ಎಂದು ಟೈಮ್ಸ್‌ ನೌ (Times Now)ಸಮೀಕ್ಷೆ ಭವಿಷ್ಯ ನುಡಿದಿದೆ. 

5 States Election: ಯೋಗಿ ಗೆಲುವಿಗೆ ಅಮಿತ್ ಶಾ ಪ್ರತಿಜ್ಞೆ, ಉತ್ತರ ಪ್ರದೇಶದಲ್ಲಿ ಸಂಚಲನ

ಇನ್ನೊಂದು ಕಡೆ ಗೃಹ ಸಚಿವ ಅಮಿತ್ ಶಾ  (Amit Shah) ಉತ್ತರ ಪ್ರದೇಶ ಗೆಲುವಿಗೆ ಬೇರೆ ಬೇರೆ ರಣ ತಂತ್ರ ರೂಪಿಸುತ್ತಿದ್ದಾರೆ. ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಯೋಗಿ ಆದಿತ್ಯನಾಥ್‌ (Yogi Adithyanath) ಕೂಡಾ ರ್ಯಾಲಿ ನಡೆಸುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಸಮಾಜವಾದಿ ಪಕ್ಷ ಹಜ್‌ ಭವನ ನಿರ್ಮಿಸಿ, ಅಯೋಧ್ಯೆ ಮೇಲೆ ದಾಳಿ ನಡೆಸಿದ ಉಗ್ರರ ರಕ್ಷಣೆ ಮಾಡಿದ್ದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾನಸ ಸರೋವರ ಭವನ ನಿರ್ಮಿಸಿತು. ಅಷ್ಟುಮಾತ್ರವಲ್ಲ ರಾಜ್ಯದ ರೈತರ ದೊಡ್ಡ ಪ್ರಮಾಣದ ಸಾಲ ಮನ್ನಾ ಮಾಡಿತು. ಇದೇ ಎರಡೂ ಸರ್ಕಾರಗಳ ನಡುವಿನ ವ್ಯತ್ಯಾಸ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್‌ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶ ಅಖಾಡದಲ್ಲಿ ಏನು ನಡೆಯುತ್ತಿದೆ.? ಗ್ರೌಂಡ್ ರಿಪೋರ್ಟ್

 

Video Top Stories