PM Modi in Varanasi ವಾರಾಣಸಿ ಜನರೊಂದಿಗೆ ಮೋದಿ ಆತ್ಮೀಯ ಸಂವಾದ, ಹೊಸ ಅಧ್ಯಾಯದತ್ತ ಉತ್ತರ ಪ್ರದೇಶ!

  • ವಾರಾಣಸಿ ಜನರೊಂದಿಗೆ ಪ್ರದಾನಿ ಮೋದಿ ಮಾತುಕತೆ
  • ಮೋದಿ ಕುರಿತು ಹಾಡು ರಚಿಸಿ ಹಾಡಿದ ವಾರಾಣಸಿ ಹಿರಿಯ ನಾಗರೀಕ
  • ನನ್ನ ಕುಟುಂಬದ ಯಾರೋಬ್ಬರು ರಾಜಕೀಯದಲ್ಲಿಲ್ಲ ಎಂದ ಮೋದಿ

Share this Video
  • FB
  • Linkdin
  • Whatsapp

ವಾರಾಣಸಿ(ಮಾ.05): ಉತ್ತರ ಪ್ರದೇಶ ಚುನಾವಣೆಯ ಅಂತಿಮ ಹಂತದ ಮತದಾನಕ್ಕೂ ಮುನ್ನ ಕೊನೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಉಳಿದುಕೊಂಡಿದ್ದಾರೆ. ನಿನ್ನೇ ಭರ್ಜರಿ ರೋಡ್ ಶೋ ನಡೆಸಿದ ಮೋದಿ ಇಂದು ವಾರಾಣಸಿ ನಾಗರೀಕರ ಜೊತೆ ಆತ್ಮೀಯ ಸಂವಾದ ನಡೆಸಿದ್ದಾರೆ. ಉತ್ತರ ಪ್ರದೇಶ ಸ್ಥಿರ ಹಾಗೂ ನಿರಂತತೆಯ ಸರ್ಕಾರವನ್ನು ಬಯಸುತ್ತದೆ. 20 ವರ್ಷಗಳ ಕಾಲ ಸರ್ಕಾರದಲ್ಲಿ ಜನರ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಕುಟುಂಬದ ಯಾರೊಬ್ಬರು ರಾಜಕೀಯದಲ್ಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಶಕ್ತಿಯೇ ದೊಡ್ಡದು ಎಂದು ಮೋದಿ ಹೇಳಿದ್ದಾರೆ. 

ಉತ್ತರ ಪ್ರದೇಶವು ಭಾರತದ ಆರ್ಥಿಕ ಪರಿವರ್ತನೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಯುಪಿ ಭಾರತದ ಆರ್ಥಿಕ ಪ್ರೇರಕ ಶಕ್ತಿಯನ್ನಾಗಿದೆ. ಆಡಳಿತದಲ್ಲಿ ನಿರಂತರತೆ ಅತ್ಯಗತ್ಯ ಏಕೆಂದರೆ ಅದು ಹೊಣೆಗಾರಿಕೆಯನ್ನು ಖಾತ್ರಿಗೊಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

Related Video