ಪಾಕಿಸ್ತಾನ ಸೇನಾ ಮುಖ್ಯಸ್ಥನಿಗೆ ಅಮೆರಿಕ ಔತಣಕೂಟ, ಟ್ರಂಪ್ ಪ್ಲಾನ್ ಉಲ್ಟಾ ಮಾಡಿತಾ ಭಾರತ?

ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್‌ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಔತಣಕೂಟ ಆಯೋಜಿಸಿದ್ದಾರೆ. ಇದರೊಂದಿಗೆ ಟ್ರಂಪ್ ವಿಶ್ವನಾಯಕನ ಪಟ್ಟ ತನ್ನದೇ ಎಂದು ಬಿಂಬಿಸಿಕೊಳ್ಳಲು ಮಾಡಿದ್ದ ಪ್ಲಾನ್ ಭಾರತ ಉಲ್ಟಾ ಮಾಡಿದೆ.

Share this Video
  • FB
  • Linkdin
  • Whatsapp

ನವದೆಹಲಿ(ಜೂ.18) ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್‌ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭರ್ಜರಿ ಔತಣ ಕೂಟ ಆಯೋಜಿಸಿದ್ದಾರೆ. ಇದಕ್ಕಾಗಿ ಆಸೀಮ್ ಮುನೀರ್ ಅಮೆರಿಕಾಗೆ ತೆರಳಿದ್ದರು. ಪೆಹಲ್ಗಾಂ ಉಗ್ರ ದಾಳಿಗೆ ಆಸೀಮ್ ಮುನೀರ್ ಮಾಡಿದ ಭಾಷಣ ಕೂಡ ಒಂದು ಕಾರಣ ಅನ್ನೋ ಗಂಭೀರ ಆರೋಪ ಮುನೀರ್ ಮೇಲಿದೆ. ಆಪರೇಶನ್ ಸಿಂದೂರ್ ಸೇರಿದಂತೆ ಬಳಿಕ ನಡೆದ ಬೆಳವಣಿಗೆಗಳ ಸ್ಪಷ್ಟ ಅರಿವಿರುವ ಟ್ರಂಪ್, ಮುನೀರ್‌ಗೆ ಔತಣಕೂಟ ನೀಡಿದೆ. ಇದೇ ವೇಳೆ ಪ್ರಧಾನಿ ಮೋದಿಯನ್ನು ಅಮೆರಿಕಗೆ ಆಹ್ವಾನಿಸಿ ತಾನೊಬ್ಬ ಶಾಂತಿ ಧೂತ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ನಾಯಕ ಅನ್ನೋ ಪಟ್ಟ ಗಿಟ್ಟಿಸಿಕೊಳ್ಳಲು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿಗ ಕೊರಳೊಡ್ಡಲು ಮಾಡಿದ್ದ ಪ್ಲಾನ್‌ನ್ನು ಭಾರತ ಉಲ್ಟಾ ಮಾಡಿದೆ. ಮೋದಿ, ಖಡಕ್ ಆಗಿ ಟ್ರಂಪ್ ಆಹ್ವಾನ ತಿರಸ್ಕರಿಸಿ ನೇರವಾಗಿ ಕ್ರೋವೇಶಿಯಾಗೆ ಪ್ರಯಾಣ ಮಾಡಿದ್ದಾರೆ. 

Related Video