UP Elections: 676 ಅಭ್ಯರ್ಥಿಗಳು ಕಣದಲ್ಲಿ, ಪ್ರತಿ ಮೂವರಲ್ಲಿ ಒಬ್ಬ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಪ್ರಕರಣ!

* 10 ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ
* 676 ಅಭ್ಯರ್ಥಿಗಳ ರಾಜಕೀಯ ಭವಿಷ್ಯ 2.14 ಕೋಟಿ ಮತದಾರ ಕೈಯಲ್ಲಿ
* ಪ್ರತಿ ಮೂವರಲ್ಲಿ ಒಬ್ಬ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಪ್ರಕರಣ
* ಸಿಎಂ ಯೋಗಿ ಆದಿತ್ಯನಾಥ್ ತವರು ಜಿಲ್ಲೆ ಗೋರಖ್‌ಪುರದಲ್ಲೂ ಮತದಾನ

Share this Video
  • FB
  • Linkdin
  • Whatsapp

ಲಕ್ನೋ(ಮಾ.03): ಉತ್ತರ ಪ್ರದೇಶದಲ್ಲಿ 6ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ. ಗುರುವಾರ 10 ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 2 ಕೋಟಿ 14 ಲಕ್ಷ ಮತದಾರರು 676 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಗೋರಖ್‌ಪುರ, ಅಂಬೇಡ್ಕರ್ ನಗರ, ಬಲ್ಲಿಯಾ, ಬಲರಾಮ್‌ಪುರ, ಬಸ್ತಿ, ದೆವೊರಿಯಾ, ಖುಷಿನಗರ, ಮಹಾರಾಜಗಂಜ್, ಸಂತ ಕಬೀರ್ ನಗರ ಹಾಗೂ ಸಿದ್ಧಾರ್ಥ ನಗರ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. 

ಅಸೋಶಿಯೇಶನ್‌ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ವರದಿಯ ಪ್ರಕಾರ ಈ ಹಂತದ ಮೂರರಲ್ಲಿ ಎರಡು ಭಾಗ ವಿಧಾನಸಭಾ ಕ್ಷೇತ್ರಗಳು ರೆಡ್‌ ಅಲರ್ಟ್‌ ಕ್ಷೇತ್ರಗಳಾಗಿವೆ. ಏಕೆಂದರೆ ಇಲ್ಲಿಯ ಪ್ರತಿ ಮೂವರು ಅಭ್ಯರ್ಥಿಗಳ ಪೈಕಿ ಒಬ್ಬರು ಕ್ರಿಮಿನಲ್‌ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ. ಬಿಜೆಪಿಯ ಭ್ರದ್ರಕೋಟೆ, ಸಿಎಂ ಯೋಗಿ ಆದಿತ್ಯನಾಥ್ ತವರು ಜಿಲ್ಲೆಯಾಗಿರುವ ಗೋರಖ್‌ಪುರದಲ್ಲಿ ಮತದಾನ ನಡೆಯಲಿದೆ. ಯೋಗಿ ಆದಿತ್ಯನಾಥ್ ಗೋರಕ್‌ ಪುರ ನಗರದಿಂದ ಕಣಕ್ಕಿಳಿದಿದ್ದರೆ, ಸಮಾಜವಾದಿ ಪಕ್ಷದಿಂದ ದಿವಂಗತ ಬಿಜೆಪಿ ನಾಯಕ ಉಪೇಂದ್ರ ದತ್ತಾ ಶುಕ್ಲಾರ ಮಡದಿ ಕಣದಲ್ಲಿದ್ದಾರೆ.

Related Video