ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರಿ ನೌಕರರಿಗೆ ಕಠಿಣ ನಿಯಮ ಜಾರಿಗೊಳಿಸಿದ್ದಾರೆ. ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಘೋಷಿಸಬೇಕೆಂಬ ಈ ಆದೇಶದಿಂದಾಗಿ ಯುಪಿ ಆಡಳಿತ ವರ್ಗದಲ್ಲಿ ತಲ್ಲಣ ಉಂಟಾಗಿದೆ.

Share this Video
  • FB
  • Linkdin
  • Whatsapp

ಉತ್ತರ ಪ್ರದೇಶ ಚುನಾವಣೆಗೆ ಇನ್ನೊಂದು ವರ್ಷ ಮಾತ್ರವೇ ಬಾಕಿ ಇರೋದು.. ಇಂತಹ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್​​ ಒಂದು ಖಡಕ್​​​ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.. ಸರ್ಕಾರಿ ಅಧಿಕಾರಿಗಳ ಮೇಲೆ ಕೈಗೊಂಡಿರೋ ಈ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.. ನಿಯಮಗಳು ಅಂತ ಬಂದಾಗ ಸಾರ್ವಜನಿಕರು ಮಾತ್ರವೇ ಪಾಲನೆ ಮಾಡ್ಬೇಕು ಅನ್ನೋ ಈ ಕಾಲಮಾನದಲ್ಲಿ ಆಡಳಿತವರ್ಗಕ್ಕೆ ಬಿಸಿಮುಟ್ಟಿಸಿರೋದು ನಿಜಕ್ಕೂ ಅಚ್ಚರಿ ಅನಿಸುತ್ತಿದೆ.. ಅಷ್ಟಕ್ಕೂ ಸರ್ಕಾರಿ ನೌಕರರ ಮೇಲೆ ಇದೇನಿದು ಯೋಗಿ ಬಾಬಾ ಸರ್ಜಿಕಲ್ ಸ್ಟ್ರೈಕ್​..?

ಯೋಗಿ ಆದಿತ್ಯನಾಥ್​​​ ಖಡಕ್​​ ಅನ್ನೋದಕ್ಕೆ ಇದೊಂದು ಉದಾಹರಣೆಯಾಗಿದೆ.. ಸಾರ್ವಜನಿಕರಾದ್ರು ಸರಿಯೇ.. ಸರ್ಕಾರಿ ನೌಕರರಾದ್ರೂ ಸರಿಯೇ.. ಸರ್ಕಾರದ ಆದೇಶವನ್ನು ಪಾಲನೆ ಮಾಡಲೇಬೇಕು.. ಇಲ್ಲದೆ ಹೋದ್ರೆ, ಶಿಕ್ಷೆ ಅನುಭವಿಸಬೇಕು ಅನ್ನೋದು ಯೋಗಿ ರೂಲ್ಸ್​​... ಇದ್ರಿಂದ ಯಾರಿಗೆಲ್ಲಾ ಏನೇನಾಗಿದೆ ಅನ್ನೋದನ್ನ ಹೇಳ್ತೀವಿ. ಯೋಗಿ ಆದಿತ್ಯನಾಥ್​​ ಈಗ ತೆಗೆದುಕೊಂಡಿರೋ ನಿರ್ಧಾರ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ.. ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಅನ್ನೋ ಕಾರಣಕ್ಕೆ ಈ ಒಂದು ಕ್ರಮವನ್ನು ಕೈಗೊಂಡಿದ್ದಾರೆ. ಯೋಗಿಯ ಸ್ಟ್ರಿಕ್ಟ್​​​​​ ರೂಲ್ಸ್​​​​ನಿಂದ ಏನೇನಾಗಿದೆ ಅನ್ನೋ ಡೀಟೈಲ್​​ ಈ ವೀಡಿಯೋದಲ್ಲಿ ಇದೆ ನೋಡಿ.

Related Video