ಸಂಧಾನ ಸಭೆ ವಿಫಲ, 'ಮಹಾ' ದಲ್ಲಿ ಕ್ಷಿಪ್ರ ಕ್ರಾಂತಿ, ಉದ್ಧವ್‌ ಠಾಕ್ರೆ ಸರ್ಕಾರ ಪತನದ ಅಂಚಿಗೆ?

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ಮುಖಂಡ ಏಕನಾಥ ಶಿಂಧೆ (Eknath Shinde) ಅವರು ತಾವು ಸೇರಿ 22 ಬೆಂಬಲಿಗ ಶಾಸಕರ ಜತೆ ಬಂಡೆದ್ದಿರುವ ಕಾರಣ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಪಾಲುದಾರಿಕೆಯ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ (MVA) ಸರ್ಕಾರಕ್ಕೆ ಪತನಗೊಳ್ಳುವ ಆತಂಕ ಎದುರಾಗಿದೆ. 

Share this Video
  • FB
  • Linkdin
  • Whatsapp

ಮುಂಬೈ (ಜೂ. 22): ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ಮುಖಂಡ ಏಕನಾಥ ಶಿಂಧೆ (Eknath Shinde) ಅವರು ತಾವು ಸೇರಿ 22 ಬೆಂಬಲಿಗ ಶಾಸಕರ ಜತೆ ಬಂಡೆದ್ದಿರುವ ಕಾರಣ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಪಾಲುದಾರಿಕೆಯ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ (MVA) ಸರ್ಕಾರಕ್ಕೆ ಪತನಗೊಳ್ಳುವ ಆತಂಕ ಎದುರಾಗಿದೆ. ಏಕನಾಥ ಶಿಂಧೆ ನೇತೃತ್ವದಲ್ಲಿ 35 ಶಾಸಕರು ಗುಜರಾತ್‌ಗೆ ಹಾರಿದ್ದಾರೆ. ಉದ್ಧವ್ ಠಾಕ್ರೆ ಹಿರಿಯ ನಾಯಕರ ಜೊತೆ ಸಭೆ ನಡೆಸಿದರೂ, ಸಂಧಾನ ಸಫಲವಾಗಲಿಲ್ಲ. 

Interview:ಅಗ್ನಿಪಥ್ ಸ್ಕೀಂ ಹಾಗೂ ರಾಹುಲ್ ಇಡಿ ಕೇಸ್: ಬಹಳಷ್ಟು ವಿಚಾರ ಮಾತನಾಡಿದ ಓಂ ಬಿರ್ಲಾ

288 ಬಲದ ವಿಧಾನಸಭೆಯಲ್ಲಿ ಒಬ್ಬ ಶಾಸಕ ನಿಧನ ಆಗಿರುವ ಕಾರಣ, ಸದಸ್ಯ ಬಲ 287ಕ್ಕೆ ಕುಸಿದಿದೆ. ಹೀಗಾಗಿ ಬಹುಮತಕ್ಕೆ 144 ಮತ ಬೇಕು. ಎಂವಿಎ ಕೂಟ 152 ಹಾಗೂ ವಿಪಕ್ಷ ಬಿಜೆಪಿ ಕೂಟ 135 ಸದಸ್ಯ ಬಲ ಹೊಂದಿವೆ.

Related Video