ಸನಾತನ ಧರ್ಮ ದ್ವೇಷವೇ ಆ ಪಕ್ಷದ ಪತನಕ್ಕೆ ಕಾರಣವಾಗುತ್ತಾ..? ಅಣ್ಣಾಮಲೈ ಹೇಳ್ತಾರೆ ತ.ಪಾಲಿಟಿಕ್ಸ್ ಬದಲಾದ ಕತೆ..!

ಅದೊಂದು ಹೇಳಿಕೆ ಸೃಷ್ಟಿಸಿತ್ತು ಕೋಲಾಹಲ!
ಅದೇ ಹೇಳಿಕೆಯೇ ಈಗ ತಿರುಗುಬಾಣವಾಯ್ತಾ..?
ಬದಲಾಯಿದೆಯಾ ತ.ನಾಡು ರಾಜಕಾರಣ..?

Share this Video
  • FB
  • Linkdin
  • Whatsapp

ತಮಿಳುನಾಡಿನ ಮುಖ್ಯಮಂತ್ರಿ ಮಗ, ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ(Sanatana Dharma) ಬಗ್ಗೆ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಅಪ್ಪನ ಕ್ಯಾಬಿನೆಟ್‌ನಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿರೊ ಉದಯನಿಧಿ(Udayanidhi) ಈ ಮಾತು ಹೇಳಿದ್ದೇ ತಡ, ಅದು ದೇಶದಾದ್ಯಂತ ಬಿರುಗಾಳಿ ಎಬ್ಬಿಸಿಬಿಡ್ತು. ಯಾವಾಗ ಈ ಉದಯನಿಧಿ ವಿರುದ್ಧವಾಗಿಯೇ ಹೆಚ್ಚೆಚ್ಚು ಚರ್ಚೆ ಶುರುವಾಯ್ತೋ, ಆಗ ಉದಯನಿಧಿ ಜೊತೆ ನಿಲ್ಲೋಕೆ ಬಂದದ್ದು. ಡಿಎಂಕೆ ಸಚಿವ ಎ ರಾಜ(A Raja) ಡಿಎಂಕೆ ನಾಯಕರು ಸನಾತನ ಧರ್ಮದ ವಿರುದ್ಧ, ಎಲುಬಿಲ್ಲದ ನಾಲಿಗೆ ಅಂತ ಬಾಯಿಗೆ ಬಂದ್ ಹಾಗೆ ಮಾತಾಡ್ತಾ ಇದಾರೆ.. ಅವರ ಮಾತು ಕೇಳೋಕೆ ಹೋದ ಜನ, ಚಪ್ಪಾಳೆ ತಟ್ತಾ ಇದಾರೆ.. ಆದ್ರೆ ಅಸಲಿಗೆ, ಡಿಎಮ್ಕೆ ನಾಯಕರ ಕುಟುಂಬ ಹೇಗಿರತ್ತಂತೆ ಗೊತ್ತಾ.? ರಾಜಕೀಯದಾಚೆ ಈ ರಾಜಕಾರಣಿಗಳ ಮನೆಯೊಳಗೆ ಹೇಗಿರುತ್ತಂತೆ ಗೊತ್ತಾ..? ಅದನ್ನ ತಮಿಳುನಾಡಿನ(Tamilnadu) ಬಿಜೆಪಿ ನಾಯಕ, ಅಣ್ಣಾಮಲೈ ಅವರೇ ಹೇಳ್ತಾರೆ ಕೇಳಿ. ಹಣೆ ತುಂಬಾ ಕಾಸಗಲ ಕುಂಕುಮ ಇಟ್ಕೊಂಡು, ರೇಷ್ಮೆ ಸೀರೆತೊಟ್ಟು, ಮಲ್ಲಿಗೆ ಹೂ ಮುಡಿದು, ದೇವರ ಮುಂದೆ ಭಕ್ತಿಯಿಂದ ಕೈಮುಗಿದು ನಿಂತಿರೋ ಈಕೆ, ದುರ್ಗಾ ಸ್ಟಾಲಿನ್.. ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ, ಉದಯನಿಧಿ ಸ್ಟಾಲಿನ್ ಅವರ ಧರ್ಮ ಪತ್ನಿ.. ಆ ಕಡೆ ಅಪ್ಪ-ಮಗ ಹಿಂದೂ ಧರ್ಮದ ವಿರುದ್ಧ, ಸನಾತನ ಪರಂಪರೆಯ ವಿರುದ್ಧ ಮಾತಾಡ್ತಾ ಇದ್ರೆ, ಈಕೆ ಮಾತ್ರ, ಗುಡಿ-ದೇವಾಲಯಗಳಿಗೆ ಶ್ರದ್ಧೆಯಿಂದ ಹೋಗ್ತಾರೆ.. ಲಕ್ಷಗಟ್ಟಲೆ ಬೆಲೆ ಬಾಳೋ ಆಭರಣ ಕೊಟ್ಟು ಹರಕೆ ತೀರಿಸ್ತಾರೆ.

ಇದನ್ನೂ ವೀಕ್ಷಿಸಿ: ಮಲಗಿದ್ದಲ್ಲೇ ಹೆಣವಾಗಿದ್ರು ಅಮ್ಮ, ಮಗ..! ತಾಯಿ ಸತ್ತ ಕೆಲವೇ ನಿಮಿಷಗಳಲ್ಲಿ ಪುತ್ರನೂ ಪ್ರಾಣಬಿಟ್ಟ..!

Related Video