Asianet Suvarna News Asianet Suvarna News

ಮೋದಿ- ಯೋಗಿ ‘ಡಬಲ್‌ ಎಂಜಿನ್‌’ ಎದುರು ಅಖಿಲೇಶ್‌ ‘ಸೈಕಲ್‌’ ಪಂಕ್ಚರ್‌ ಆಗಿದ್ಹೇಗೆ?

ಉತ್ತರಪ್ರದೇಶದ ಮೂರೂವರೆ ದಶಕಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಆಡಳಿತಾರೂಢ ಪಕ್ಷವೊಂದು ಮತ್ತೊಮ್ಮೆ ಗದ್ದುಗೆ ಹಿಡಿದಿದೆ. ಬಿಜೆಪಿ ಭರ್ಜರಿ ಬಹುಮತದೊಂದಿಗೆ ಪುನರಾಯ್ಕೆಯಾಗಿದೆ. ಮೋದಿ- ಯೋಗಿ ಎಂಬ ‘ಡಬಲ್‌ ಎಂಜಿನ್‌’ ಎದುರು ಅಖಿಲೇಶ್‌ರ ‘ಸೈಕಲ್‌’ ಪಂಕ್ಚರ್‌ ಆಗಿದೆ. 

Uttara Pradesh: 37 ವರ್ಷಗಳ ಬಳಿಕ ಸತತ 2 ನೇ ಬಾರಿ ಯುಪಿ ಗೆದ್ದ ಬಿಜೆಪಿ

ಉತ್ತರಪ್ರದೇಶದಲ್ಲಿ ಕಾನೂನು- ಸುವ್ಯವಸ್ಥೆ ತಳಿ ತಪ್ಪಿತ್ತು. ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾದ ಬಳಿಕ ಕಾನೂನು ಸುವ್ಯವಸ್ಥೆಯನ್ನು ಸರಿದಾರಿಗೆ ತರಲು ಯತ್ನಿಸಿದರು. ಗೂಂಡಾಗಳ ಹೆಡೆಮುರಿ ಕಟ್ಟಿದರು. ಸರ್ಕಾರದಿಂದ ಎಕ್ಸ್‌ಪ್ರೆಸ್‌ ವೇ, ಹೆದ್ದಾರಿ, ವಿಮಾನ ನಿಲ್ದಾಣದಂತಹ ಮೂಲಸೌಕರ್ಯ ಯೋಜನೆಗಳಿಗೆ ಒತ್ತು ನೀಡಿದರು.  ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌, ಉಚಿತ ಅಡುಗೆ ಅನಿಲ ಸಂಪರ್ಕ ನೀಡುವ ಉಜ್ವಲಾ, ಕೋವಿಡ್‌ ಸಂದರ್ಭದಲ್ಲಿ ಉಚಿತ ಆಹಾರ ಧಾನ್ಯ ನೀಡುವಂತಹ ಯೋಜನೆಗಳು, ಯಶಸ್ವಿಯಾಗಿ ಕೊರೋನಾ ನಿರ್ವಹಣೆ ಮತದಾರರ ಮನಗೆದ್ದವು. ಯೋಗಿ ಆಳ್ವಿಕೆಯಲ್ಲಿ  ಭ್ರಷ್ಟಾಚಾರ ತಗ್ಗಿತ್ತು. ಯೋಗಿ ಆದಿತ್ಯನಾಥ್‌ ಅವರು ಬ್ರಹ್ಮಚಾರಿಯಾಗಿರುವ ಕಾರಣ ಸ್ವಜನ ಪಕ್ಷಪಾತ ಎಂಬುದು ದೂರ ಸರಿದಿತ್ತು.

ಇದೆಲ್ಲದರ ನಡುವೆ ವಾರಾಣಸಿಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದು, ಅಯೋಧ್ಯೆ ಮಂದಿರವನ್ನು ನಿರ್ಮಿಸಲು ಹೆಚ್ಚಿನ ಶ್ರಮ ಹಾಕಿದ್ದು ಬಿಜೆಪಿಯ ಪಾರಂಪರಿಕ ಮತದಾರರ ಮನ ಗೆದ್ದಿತು. ಉತ್ತಮ ಆಡಳಿತ ತಳ ಸಮುದಾಯವೂ ಸೇರಿದಂತೆ ಇತರೆ ವರ್ಗಗಳನ್ನು ಸೆಳೆಯಿತು. 

Video Top Stories