ಕಾರ್ಮಿಕರ, ನಿರುದ್ಯೋಗಿಗಳ, ಅನಾಥರ ಬಂಧುವಾದ ಸೋನು ಸೂದ್ಗಾಗಿ ದೇವಾಲಯ!
ಸಂಕಷ್ಟದಲ್ಲಿ ಸಹಾಯ ಮಾಡೋರನ್ನ ಜನರು ದೇವರ ಪ್ರತಿರೂಪವಾಗಿ ಕಾಣ್ತಾರೆ. ಕೆಲ ಸಿನಿಪ್ರಿಯರು ತಾವು ಆರಾಧಿಸುವ ತಮ್ಮ ನೆಚ್ಚಿನ ನಟ ನಟಿಯರಿಗಾಗಿ ದೇವಾಲಯ ನಿರ್ಮಿಸಿರೋದಿದೆ. ಈಗ ತೆಲಂಗಾಣದ ಜನತೆ ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯ ಕಾರ್ಯಗಳನ್ನ ಮೆಚ್ಚಿ ಅವರಿಗಾಗಿ ಗುಡಿ ಕಟ್ಟಿಸಿದ್ದಾರೆ.
ಹೈದರಾಬಾದ್(ಡಿ.21): ಸಂಕಷ್ಟದಲ್ಲಿ ಸಹಾಯ ಮಾಡೋರನ್ನ ಜನರು ದೇವರ ಪ್ರತಿರೂಪವಾಗಿ ಕಾಣ್ತಾರೆ. ಕೆಲ ಸಿನಿಪ್ರಿಯರು ತಾವು ಆರಾಧಿಸುವ ತಮ್ಮ ನೆಚ್ಚಿನ ನಟ ನಟಿಯರಿಗಾಗಿ ದೇವಾಲಯ ನಿರ್ಮಿಸಿರೋದಿದೆ. ಈಗ ತೆಲಂಗಾಣದ ಜನತೆ ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯ ಕಾರ್ಯಗಳನ್ನ ಮೆಚ್ಚಿ ಅವರಿಗಾಗಿ ಗುಡಿ ಕಟ್ಟಿಸಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್ ಭಾರೀ ಪ್ರಶಂಸೆ ಗಿಟ್ಟಿಸಿದ್ದರು. ಅವರ ಮಾನವೀಯ ಕಾರ್ಯ ಅಷ್ಟಕ್ಕೇ ನಿಲ್ಲಲಿಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಅನೇಕ ಬಡವರಿಗೆ, ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕೊಡಿಸುವಲ್ಲಿ ಅನೇಕ ಜನರಿಗೆ ಸೂದ್ ನೆರವಾಗಿದ್ದಾರೆ.
ಹೀಗಾಗಿ ದೇಶದ ಜನರು ಸೋನು ಸೂದ್ ಬಗ್ಗೆ ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಜನತೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋನು ಸೂದ್ಗಾಗಿ ದೇಗುಲವನ್ನೇ ಕಟ್ಟಿಸಿದ್ದಾರೆ.