ಕೈಲಾಸದಿಂದ ಬಂದ ನಿತ್ಯಾ ಸುಂದರಿ ವಿರುದ್ಧ ಭಾರತೀಯರು ರೊಚ್ಚಿಗೆದ್ದಿದ್ದೇಕೆ..?

ವಿಶ್ವಸಂಸ್ಥೆಯ ಅಂಗಸಂಸ್ಥೆಯ ಸಭೆಯೊಂದರಲ್ಲಿ ಭಾಗಿಯಾಗಿದ್ದ ನಿತ್ಯಾನಂದನ ಶಿಷ್ಯೆ ವಿಜಯಪ್ರಿಯ ನಿತ್ಯಾನಂದ ಮತ್ತು ಇಯಾನ್‌ ಕುಮಾರ್‌ ಎಂಬುವವರು, ನಿತ್ಯಾನಂದ ಸ್ವಾಮಿಯು, ಪುರಾತನ ಹಿಂದೂ ನೀತಿ ಮತ್ತು ದೇಶೀಯ ಪರಿಹಾರಗಳನ್ನು ಕೈಲಾಸ ದೇಶದಲ್ಲಿ ಜಾರಿಗೊಳಿಸುತ್ತಿದ್ದಾರೆ ಎಂದೂ ಬಿಂಬಿಸುವ ಯತ್ನ ಮಾಡಿದ್ದರು. 

Share this Video
  • FB
  • Linkdin
  • Whatsapp

ಸದ್ಯ ವಿದೇಶಕ್ಕೆ ಪರಾರಿಯಾಗಿರುವ ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂಘೋಷಿತ ಧರ್ಮಗುರು, ಬಿಡದಿ ನಿತ್ಯಾನಂದ ಆಶ್ರಮದ ನಿತ್ಯಾನಂದ ಸ್ವಾಮಿ, ತನ್ನ ‘ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ’ ದೇಶಕ್ಕೆ ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾನೆ. ಈ ಮೂಲಕ ತನ್ನ ದೇಶಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಸಿಕ್ಕಿದೆ ಎಂದು ಜನರನ್ನು ನಂಬಿಸುವ ಯತ್ನಕ್ಕೆ ಕೈ ಹಾಕಿದ್ದಾನೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯ ಸಭೆಯೊಂದರಲ್ಲಿ ಭಾಗಿಯಾಗಿದ್ದ ನಿತ್ಯಾನಂದನ ಶಿಷ್ಯೆ ವಿಜಯಪ್ರಿಯ ನಿತ್ಯಾನಂದ ಮತ್ತು ಇಯಾನ್‌ ಕುಮಾರ್‌ ಎಂಬುವವರು, ನಿತ್ಯಾನಂದ ಸ್ವಾಮಿಯು, ಪುರಾತನ ಹಿಂದೂ ನೀತಿ ಮತ್ತು ದೇಶೀಯ ಪರಿಹಾರಗಳನ್ನು ಕೈಲಾಸ ದೇಶದಲ್ಲಿ ಜಾರಿಗೊಳಿಸುತ್ತಿದ್ದಾರೆ ಎಂದೂ ಬಿಂಬಿಸುವ ಯತ್ನ ಮಾಡಿದ್ದರು. 

Related Video