ಸುಶಾಂತ್‌ ಸಿಂಗ್‌ ಸಾವಿನ ಸಂದೇಹಕ್ಕೆ ತೆರೆ ಎಳೆದ ಪೋಸ್ಟ್ ಮಾರ್ಟಂ ರಿಪೋರ್ಟ್

ದೇಶ ಕಂಡ ಅದ್ಭುತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಗೆ ಬೆಳ್ಳಿ ತೆರೆ ಮೇಲೆ ಜೀವ ತುಂಬಿ ಪ್ರಸಿದ್ಧರಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 15): ದೇಶ ಕಂಡ ಅದ್ಭುತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಗೆ ಬೆಳ್ಳಿ ತೆರೆ ಮೇಲೆ ಜೀವ ತುಂಬಿ ಪ್ರಸಿದ್ಧರಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಪೋಸ್ಟ್ ಮಾರ್ಟಂ ವರದಿ ಬಂದಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿ ಬಂದಿದ್ದು ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ. 

ಟೀವಿ ಸೀರಿಯಲ್‌ನಿಂದ ಬಂದ ಸ್ಟಾರ್‌; 7ನೇ ರ‌್ಯಾಂಕ್ ಬಂದಿದ್ದರೂ ಎಂಜಿನಿಯರಿಂಗ್ ಬಿಟ್ಟಿದ್ದ!

ಕಳೆದ 6 ದಿನಗಳಿಂದ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ನವೆಂಬರ್‌ನಲ್ಲಿ ಇವರ ಮದುವೆಗೆ ಕುಟುಂಬ ವರ್ಗ ಮದುವೆ ಸಿದ್ಧತೆ ನಡೆಸಿತ್ತು. ಆದರೆ ವಿಧಿ ವಿಪರ್ಯಾಸ ಬೇರೆಯೇ ಆಗಿತ್ತು. ಇವರ ಪೋಸ್ಟ್ ಮಾರ್ಟಂ ವರದಿ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..! 

Related Video