ಕೃಷಿ ಕಾಯ್ದೆಗಳಿಗೆ ಸುಪ್ರೀಂ ತಾತ್ಕಾಲಿಕ ತಡೆ, ಏನಾಗಬಹುದು ಕೇಂದ್ರದ ಮುಂದಿನ ನಡೆ?
ಸಾಕಷ್ಟು ಚರ್ಚೆ, ವಿಮರ್ಶೆಗೆ ಒಳಪಟ್ಟಿದ್ದ ಕೃಷಿ ಕಾಯ್ದೆ ಕುರಿತು ಎದ್ದಿರುವ ವಿವಾದ ಇತ್ಯರ್ಥ ಸಂಬಂಧ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದೆ. ಸರ್ಕಾರ ಮತ್ತು ರೈತ ಸಂಘಟನೆಗಳು ಕಾಯ್ದೆ ಕುರಿತ ತಮ್ಮ ಅಭಿಪ್ರಾಯಗಳನ್ನು ಸಮಿತಿ ಮುಂದೆ ಮಂಡಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ನವದೆಹಲಿ (ಜ. 13): ಸಾಕಷ್ಟು ಚರ್ಚೆ, ವಿಮರ್ಶೆಗೆ ಒಳಪಟ್ಟಿದ್ದ ಕೃಷಿ ಕಾಯ್ದೆ ಕುರಿತು ಎದ್ದಿರುವ ವಿವಾದ ಇತ್ಯರ್ಥ ಸಂಬಂಧ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದೆ. ಸರ್ಕಾರ ಮತ್ತು ರೈತ ಸಂಘಟನೆಗಳು ಕಾಯ್ದೆ ಕುರಿತ ತಮ್ಮ ಅಭಿಪ್ರಾಯಗಳನ್ನು ಸಮಿತಿ ಮುಂದೆ ಮಂಡಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಕೃಷಿ ಕಾಯ್ದೆ ಸೇರಿ 3 ಮಸೂದೆಗೆ ಸುಪ್ರೀಂ ತಡೆ ನೀಡಲು ಕಾರಣವೇನು?
ಅಲ್ಲದೆ ಹಾಲಿ ಕೃಷಿ ಕಾಯ್ದೆ ಜಾರಿಗೂ ಮುನ್ನ ಜಾರಿಯಲ್ಲಿದ್ದ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ತನ್ನ ಮುಂದಿನ ಆದೇಶದವರೆಗೂ ಜಾರಿಯಲ್ಲಿರಬೇಕು. ಹೊಸ ಕೃಷಿ ಕಾಯ್ದೆಯ ನಿಯಮಗಳ ಅನ್ವಯ ಯಾವುದೇ ರೈತರು ಭೂಮಿ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ ಸುಪ್ರೀಂಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.