ಅಬ್ಬಬ್ಬಾ...! ಏಕಾಏಕಿ ಸಿಂಕ್ ಹೋಲ್‌ನಲ್ಲಿ ಮುಳುಗಿದ ಕಾರು!

ಮಳೆಯ ಅಬ್ಬರಕ್ಕೆ ಮಹಾರಾಷ್ಟ್ರದ ಹಲವು ಪ್ರದೇಶಗಳು ನಲುಗಿವೆ. ಮುಂಬೈ ನಗರದಲ್ಲಿಯೂ ಮಳೆಯ ಅಬ್ಬರ ಜೋರಾಗಿದ್ದು, ಘಾಟ್ಕೋಪರ್ ಪ್ರದೇಶದಲ್ಲಿ ನೋಡ ನೋಡುತ್ತಿದ್ದಂತೆಯೇ ಮಳೆಯ ಅಬ್ಬರಕ್ಕೆ ಬೃಹತ್ ಸಿಂಕ್ ಹೋಲ್ ನಲ್ಲಿ ಕಾರು ಮುಳುಗಿರುವ ವಿಡಿಯೋ ವೈರಲ್ ಆಗತೊಡಗಿದೆ. 

Share this Video
  • FB
  • Linkdin
  • Whatsapp

ಮುಂಬೈ(ಜೂ.16): ಮಳೆಯ ಅಬ್ಬರಕ್ಕೆ ಮಹಾರಾಷ್ಟ್ರದ ಹಲವು ಪ್ರದೇಶಗಳು ನಲುಗಿವೆ. ಮುಂಬೈ ನಗರದಲ್ಲಿಯೂ ಮಳೆಯ ಅಬ್ಬರ ಜೋರಾಗಿದ್ದು, ಘಾಟ್ಕೋಪರ್ ಪ್ರದೇಶದಲ್ಲಿ ನೋಡ ನೋಡುತ್ತಿದ್ದಂತೆಯೇ ಮಳೆಯ ಅಬ್ಬರಕ್ಕೆ ಬೃಹತ್ ಸಿಂಕ್ ಹೋಲ್ ನಲ್ಲಿ ಕಾರು ಮುಳುಗಿರುವ ವಿಡಿಯೋ ವೈರಲ್ ಆಗತೊಡಗಿದೆ. 

ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಬಾವಿ ಇತ್ತು. ಆದರೆ ಅದನ್ನು ಪಾರ್ಕಿಂಗ್ ಉದ್ದೇಶಕ್ಕೆ ಬಳಕೆ ಮಾಡುವ ಕಾರಣದಿಂದ ರಾಮ್ ನಿವಾಸ್ ಸೊಸೈಟಿಯ ನಿವಾಸಿಗಳು ಸಿಮೆಂಟ್ ನಿಂದ ಆ ಪ್ರದೇಶವನ್ನು ಮುಚ್ಚಿ ಪಾರ್ಕಿಂಗ್ ಪ್ರದೇಶವನ್ನಾಗಿ ಮಾಡಿಕೊಂಡಿದ್ದರು.

ಮಳೆಯ ತೀವ್ರತೆಗೆ ಸಿಮೆಂಟ್ ಅಸ್ತವ್ಯಸ್ತಗೊಂಡಿದ್ದು ಬೃಹತ್ ಗಾತ್ರದ ಸಿಂಕ್ ಹೋಲ್ ಬಾಯ್ತೆರೆದುಕೊಂಡಿದ್ದು, ಸೊಸೈಟಿಯ ನಿವಾಸಿ ಪಂಕಜ್ ಮೆಹ್ತಾ ಅವರ ಕಾರು ಸಿಂಕ್ ಒಳಗೆ ಮುಳುಗಿ ಹೋಗಿದೆ. ಅದೃಷ್ಟವಶಾತ್ ಕಾರ್ ನಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಪ್ರಾಣ ಅಪಾಯಗಳು ಸಂಭವಿಸಿಲ್ಲ. 

Related Video