Asianet Suvarna News Asianet Suvarna News

ಕೊರೋನಾ ಹೆಚ್ಚಳ: ಭಾರತದ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಟೆಸ್ಟ್ ಕಡ್ಡಾಯ

ಚೀನಾ  ಮಾತ್ರವಲ್ಲ  ಜಪಾನ್‌, ದಕ್ಷಿಣ ಕೊರಿಯಾ, ಫ್ರಾನ್ಸ್‌, ಬ್ರೆಜಿಲ್‌, ಅಮೆರಿಕ ಅತಿ ಹೆಚ್ಚು ದೈನಂದಿನ ಕೇಸುಗಳು ವರದಿಯಾಗುತ್ತಿರುವ ಟಾಪ್‌ 5 ದೇಶಗಳು ಎನಿಸಿಕೊಂಡಿವೆ. ಹೀಗಾಗಿ ವಿದೇಶಿ ಪ್ರಯಾಣಿಕರಿಗೆ ಭಾರತದಲ್ಲಿ ಆರ್‌ಟಿಪಿಸಿಆರ್‌ ಟೆಸ್ಟ್ ಕಡ್ಡಾಯ ಮಾಡಲಾಗಿದೆ.

ಚೀನಾ ಮಾತ್ರವಲ್ಲ, 5 ವಿದೇಶಗಳಲ್ಲಿ ಮತ್ತೆ ಕೋವಿಡ್‌ ಪ್ರಕರಣ ಹಾಗೂ ಸೋಂಕಿತರ ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜಪಾನ್‌, ದಕ್ಷಿಣ ಕೊರಿಯಾ, ಫ್ರಾನ್ಸ್‌, ಬ್ರೆಜಿಲ್‌, ಅಮೆರಿಕ ಅತಿ ಹೆಚ್ಚು ದೈನಂದಿನ ಕೇಸುಗಳು ವರದಿಯಾಗುತ್ತಿರುವ ಟಾಪ್‌ 5 ದೇಶಗಳು ಎನಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಭಾರತದ ಏರ್‌ಪೋರ್ಟ್‌ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿದೇಶಿ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ರೂಪಾಂತರಿ ವೈರಸ್ ಜಾಗತಿಕವಾಗಿ ಅಪಾಯ ಒಡ್ಡುತ್ತಿದ್ದು, ಹೊರದೇಶದಿಂದ ಬರುತ್ತಿರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಪ್ರಸಕ್ತ ನಿತ್ಯ 153 ಹೊಸ ಕೇಸುಗಳು ವರದಿಯಾಗುತ್ತಿದೆ. ಹೀಗಾಗಿ ಹೆಚ್ಚುವರಿ ಕ್ರಮಗಳ ಆದ್ಯತೆ ಇದೆ ಎಂದು ಹೇಳಿದ್ದಾರೆ. ವಿಶ್ವದಲ್ಲಿ ಪ್ರತಿದಿನ 5 ಲಕ್ಷ ಕೊರೊನಾ ಕೇಸ್​​ಗಳು ಪತ್ತೆಯಾಗುತ್ತಿದೆ, ಜಪಾನ್​, ಅಮೆರಿಕ, ಫ್ರಾನ್ಸ್​, ಚೀನಾದಲ್ಲಿ ಕೊರೊನಾ ಹೆಚ್ಚಾಗುತ್ತಿದೆ, ಈ ಹಿಂದೆ ಕೊರೊನಾವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ, ಕೊರೊನಾ‌ ವಿರುದ್ಧ ಹೋರಾಡಲು ರಾಜ್ಯಗಳಿಗೆ ಕೇಂದ್ರದಿಂದ ನೆರವು ನೀಡಲಾಗಿದೆ ಎಂದಿದ್ದಾರೆ.

Video Top Stories