
ಬಂಡಾಯ ಶಾಸಕರ ಅನರ್ಹತೆ ಯತ್ನಕ್ಕೆ ಸುಪ್ರೀಂ ತಡೆ: ಅಘಾಡಿ ಸರ್ಕಾರಕ್ಕೆ ಭಾರೀ ಹಿನ್ನಡೆ!
ಮಹಾರಾಷ್ಟ್ರ ರಾಜಕೀಯ ನಾಟಕಕ್ಕೆ ಸಂಬಂಧಿಸಿದ ಮಹತ್ವದ ವಿದ್ಯಮಾನವೊಂದರಲ್ಲಿ ಶಿವಸೇನೆಯ ಬಂಡಾಯ ಶಾಸಕರ ಅನರ್ಹತೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಜುಲೈ 11ರವರೆಗೆ ತಡೆಯಾಜ್ಞೆ ನೀಡಿದೆ. ಇದೇ ವೇಳೆ, ಅನರ್ಹತೆ ನೋಟಿಸ್ ಪ್ರಶ್ನಿಸಿ ಶಿವಸೇನಾ ಶಾಸಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಉಪ ಸ್ಪೀಕರ್ ನರಹರಿ ಜೀರ್ವಾಲ್ ಅವರಿಂದ ಪ್ರತಿಕ್ರಿಯೆ ಬಯಸಿದೆ.
ಮುಂಬೈ(ಜೂ.28): ಬಂಡಾಯ ಶಾಸಕರ ತಂಡಕ್ಕೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜುಲೈ 11ರವರೆಗೆ ಯಾವುದೇ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ. ಅಲ್ಲದೇ ಈ ವಿಚಾರವಾಗಿ ಸ್ಪಷ್ಟನೆ ನೀಡುವಂತೆ ಉದ್ಧವ್ ಸರ್ಕಾರ ಹಾಗೂ ಡೆಪ್ಯೂಟಿ ಸ್ಪೀಕರ್‌ಗೆ ನೋಟಿಸ್ ನೀಡಿದೆ.
ಈ ಹಿಂದೆ ಸರ್ಕಾರದ ವಿರುದ್ಧ ಬಂಡಾಯವೆದ್ದು ಗುವಾಹಟಿ ಹೋಟೆಲ್ ಸೇರಿದ್ದ ಶಾಸಕರ ಪೈಕಿ ಶಿಂಧೆ ಸೇರಿದಂತೆ ಹದಿನಾರು ನಾಯಕರಿಗೆ ಡೆಪ್ಯೂಟಿ ಸ್ಪೀಕರ್ ನೋಟಿಸ್ ಕಳುಹಿಸಿದ್ದರೆಂಬುವುದು ಉಲ್ಲೇಖನೀಯ.