Asianet Suvarna News Asianet Suvarna News

News Hour: ಕೊನೇ ಹಂತಕ್ಕೂ ಮುನ್ನ ಬಿಜೆಪಿಗೆ ಶಾಕ್‌ ನೀಡಿದ ಸಟ್ಟಾ ಬಜಾರ್ ಭವಿಷ್ಯ!

ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನಕ್ಕೂ ಮುನ್ನವೇ ಸಟ್ಟಾ ಬಜಾರ್‌ ಭವಿಷ್ಯ ಆಡಳಿತಾರೂಢ ಪಕ್ಷಕ್ಕೆ ಶಾಕ್‌ ನೀಡಿದೆ. ಬಿಜೆಪಿ ಸೀಟ್‌ ಗೆಲುವಿನ ಸಂಖ್ಯೆ ಇಳಿಮುಖವಾಗ್ತಿದೆ ಅನ್ನೋ ಸೂಚನೆ ನೀಡಿದೆ.

ಬೆಂಗಳೂರು (ಮೇ.29): ಜೂನ್‌ 1ಕ್ಕೆ ಲೋಕಸಭೆ ಚುನಾವಣೆಯ ಕೊನೆ ಹಂತದ ಮತದಾನ ನಡೆಯಲಿದೆ. ಅದೇ ದಿನ ಎಕ್ಸಿಟ್‌ ಪೋಲ್‌ ಕೂಡ ಬಿಡುಗಡೆಯಾಗಲಿದೆ. ಆದರೆ, ಸಟ್ಟಾ ಬಜಾರ್‌ ಬಿಜೆಪಿಗೆ ಆಘಾತಕಾರಿಯಾದ ಫಲಿತಾಂಶಗಳು ಬರುವ ಸೂಚನೆ ನೀಡಿದೆ.

ಚುನಾವಣೆಗೂ ಮುನ್ನ ಬಿಜೆಪಿಗೆ 315 ಸೀಟ್‌ಗಳ ಅಂದಾಜು ನೀಡಿದ ಸಟ್ಟಾ ಬಜಾರ್‌, 6ನೇ ಹಂತದ ಚುನಾವಣೆ ಮುಗಿದ ಬಳಿಕ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಹಂತದಿಂದ ಹಂತಕ್ಕೆ ಬಿಜೆಪಿ ಗೆಲುವಿನ ಸಂಖ್ಯೆ ಇಳಿಮುಖವಾಗುತ್ತಿದೆ.

ದೇಶದ ಚುನಾವಣೆಯ ಅನಧಿಕೃತ ಎಕ್ಸಿಟ್‌ ಪೋಲ್‌, ಏನಿದು ಫಲೋಡಿ ಸತ್ತಾ ಬಜಾರ್‌?

ಹಾಗಂತ ಕಾಂಗ್ರೆಸ್ ಪಕ್ಷದ ಗೆಲುವಿನ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಪ್ರಾದೇಶಿಕ ಪಕ್ಷಗಳು ಗೆಲ್ಲುವ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು ಎನ್ನಲಾಗಿದೆ. ಸಟ್ಟಾ ಬಜಾರ್‌ನಲ್ಲಿ ಬಿಜೆಪಿ ಗೆಲುವಿನ ಪರವಾಗಿಯೇ ಹೆಚ್ಚಿನ ಬೆಟ್ಟಿಂಗ್‌ ನಡೆದಿದೆ.