News 360: ಕಾಶಿ,ಮಥುರಾ ನಂತರ ಮತ್ತೆರಡು ಮಸೀದಿಗಳ ವಿವಾದ..!

ಕಾಶಿ, ಮಥುರಾ ನಂತರ ಸಂಭಾಲ್ ಮತ್ತು ಅಜ್ಮೀರ್‌ನಲ್ಲಿ ಮಸೀದಿ ವಿವಾದ ಮುನ್ನೆಲೆಗೆ ಬಂದಿದೆ. ಹಿಂದೂ ದೇವಸ್ಥಾನಗಳ ಮೇಲೆ ಮಸೀದಿ, ದರ್ಗಾ ನಿರ್ಮಾಣದ ಆರೋಪ ಕೇಳಿಬಂದಿದ್ದು, ಸಂಭಾಲ್ ಮಸೀದಿ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

First Published Nov 30, 2024, 3:38 PM IST | Last Updated Nov 30, 2024, 3:38 PM IST

ಬೆಂಗಳೂರು (ನ.30): ಕಾಶಿ, ಮಥುರಾ ನಂತರ ಮತ್ತೆರಡು ಮಸೀದಿಗಳ ವಿವಾದ ಮುನ್ನೆಲೆಗೆ ಬಂದಿದೆ. ಸಂಭಾಲ್ ಮಸೀದಿ ಮತ್ತು ಅಜ್ಮೀರ್‌ನ ಷರೀಫ್ ದರ್ಗಾ ವಿವಾದ ಕೋರ್ಟ್‌ ಎದುರು ಬಂದಿದೆ.

ಉತ್ತರ ಪ್ರದೇಶದ ಸಂಭಾಲ್ ಮಸೀದಿ ಹರಿಹರ ಮಂದಿರ ಎಂದು ಹೇಳಲಾಗಿದ್ದರೆ, ರಾಜಸ್ಥಾನದ ಅಜ್ಮೀರ್‌ನ ಪ್ರಸಿದ್ಧ ದರ್ಗಾ ಶಿವನ ದೇವಸ್ಥಾನ ಎಂದು ಹಿಂದೂ ಕಡೆಯವರು ಹೇಳಿದ್ದಾರೆ. ಈ ವೇಳೆ ಸಂಭಾಲ್ ಮಸೀದಿ ಸರ್ವೇಗೆ ಮುಸ್ಲಿಮರು ಗಲಭೆ ಆರಂಭಿಸಿದ್ದಾರೆ.

ವೆಬ್‌ ಸಿರೀಸ್‌ Ranking: ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌, ಓವರ್‌ಹೈಪ್‌ ಯಾವುದು ಅನ್ನೋದನ್ನ ನೋಡಿ!

ಹಿಂದೂ ದೇವಸ್ಥಾನದ ಮೇಲೆ ಮಸೀದಿ, ದರ್ಗಾ ನಿರ್ಮಾಣದ ಆರೋಪ ಮಾಡಲಾಗಿದೆ. ಸಂಭಾಲ್ ಮಸೀದಿ ವಿವಾದದ ಕೇಸ್ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಾಗಿದೆ. ಸಂಭಾಲ್ ಜಿಲ್ಲಾ ಕೋರ್ಟ್​ ಪ್ರಕ್ರಿಯೆಗೆ ತಡೆ ನೀಡಿದ ಸುಪ್ರೀಂಕೋರ್ಟ್, ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.  ಸಂಭಾಲ್ ಶಾಹಿ ಜಾಮಾ ಮಸೀದಿ ಕಮಿಟಿಗೆ ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿದೆ.