Asianet Suvarna News Asianet Suvarna News

Sadhguru Exclusive Interview; ಸಾವಯವ ಕೃಷಿ ಎಂಬುದೇ ಇಲ್ಲ

ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ ಸದ್ಗುರು ಕೈಗೊಂಡಿದ್ದ ಬೈಕ್‌ ಯಾತ್ರೆ 100 ದಿನಗಳನ್ನು ಪೂರ್ಣಗೊಳಿಸಿದೆ. ಇದೀಗ ಅವರು ನೀಡಿರುವ ಸಂದರ್ಶನ ಇಲ್ಲಿದೆ.

ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ ಸದ್ಗುರು ಕೈಗೊಂಡಿದ್ದ ಬೈಕ್‌ ಯಾತ್ರೆ 100 ದಿನಗಳನ್ನು ಪೂರ್ಣಗೊಳಿಸಿದೆ. ಮಾರ್ಚ್ ಮೂರನೇ ವಾರ ಯೂರೋಪ್‌ನಿಂದ ಬೈಕ್‌ ಯಾತ್ರೆ ಆರಂಭವಾಗಿ ಯುರೋಪ್‌, ಮಧ್ಯಏಷ್ಯಾದ 27 ದೇಶಗಳು, ಭಾರತದ 10 ರಾಜ್ಯಗಳಿಗೆ ತೆರಳಿ ಸದ್ಯ ತಮಿಳುನಾಡು ತಲುಪಿದೆ. ಈವರೆಗೂ 74 ದೇಶಗಳು, ಭಾರತದಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳು ಮಣ್ಣನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಸದ್ಗುರು ಜೊತೆ ಗಾಲ್ಫ್ ಕ್ಲಬ್‌ನಲ್ಲಿ ರಕುಲ್ ಮತ್ತು ಕಪಿಲ್ ದೇವ್

ಏಷಿಯಾನೆಟ್ ನ್ಯೂಸ್‌ನೊಂದಿಗಿನ ವಿಶೇಷ ಸಂದರ್ಶನದಲ್ಲಿ ಭಾಗಿಯಾದ ಇಶಾ ಫೌಂಡೇಶನ್ ಸಂಸ್ಥಾಪಕ jaggi vasudev. ನಗರವಾಸಿಗಳಿಗೆ ಕೃಷಿಯ ಬಗ್ಗೆ ಏನೂ ತಿಳಿದಿಲ್ಲ. ಸಾವಯವ ಕೃಷಿ ಎಂಬುದೇ ಇಲ್ಲ.  ಅವರು ಕೇವಲ ಈ ಪದಗಳನ್ನು  ಬಳಸುತ್ತಿದ್ದಾರೆ. ಇದನ್ನೆಲ್ಲ ನಗರ ಪ್ರದೇಶದ ಜನರು ಪ್ರಚಾರ ಮಾಡುತ್ತಿದ್ದಾರೆ, ಕೃಷಿಯ ಬಗ್ಗೆ ಏನೂ ತಿಳಿದಿಲ್ಲ, ನೀವು ರೈತನಿಗೆ ಹೇಗೆ ಕೃಷಿ ಮಾಡಬೇಕು ಎಂದು ಹೇಳುವುದಿಲ್ಲ. ಇಂದು ಸಾವಯವ ಕೃಷಿ ಎಂದರೆ ಗೊಬ್ಬರವಿಲ್ಲ ಮತ್ತು ಕೀಟನಾಶಕವಿಲ್ಲ ಎನ್ನುತ್ತಾರೆ. ಇಂದು ನೀವು ಅದನ್ನು ಮಾಡಿದರೆ, ಆಹಾರ ಉತ್ಪಾದನೆಯು ಜಗತ್ತಿನಲ್ಲಿ  ಶೇಕಡಾ 25 ಕ್ಕೆ ಇಳಿಯುತ್ತದೆ. ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾದರೆ, ರಸಗೊಬ್ಬರಗಳ ಬಳಕೆ ತನ್ನಿಂದ ತಾನೇ ಇಳಿಯಲು ಪ್ರಾರಂಭಿಸುತ್ತದೆ. ಅದು ನಡೆಯಬೇಕಾದ ರೀತಿ. ನೀವು ರಸಗೊಬ್ಬರ ಬಳಕೆ ನಿಲ್ಲಿಸಿ  ಎಂದು ಹೇಳಿದ್ದಾರೆ.

Video Top Stories