Russia Ukraine war ಉಕ್ರೇನ್ ಗಡಿ ದಾಟುವ ವ್ಯಕ್ತಿಗಳಿಗೆ ಭಾರತದ ಪ್ರಜೆಗಳ ಸಹಾಯ!

ಭಾರತದ ಎಲ್ಲಾ ಪ್ರಜೆಗಳ ರಕ್ಷಣೆಪೋಲೆಂಡ್ ಗಡಿಯಲ್ಲಿ ಭಾರತದ ವಿದ್ಯಾರ್ಥಿಗಳಿಗೆ ಸಹಾಯಸೇವಾ ಯುರೋಪ್ ಸಂಘಟನೆಯ ಮೂಲಕ ಸ್ಥಳೀಯ ನಾಗರಿಕರಿಗೆ ನೆರವು

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.11): ಉಕ್ರೇನ್ (Ukraine) ದೇಶದಲ್ಲಿ ದಿನದಿಂದ ದಿನಕ್ಕೆ ರಷ್ಯಾದ (Russia) ಆಕ್ರಮಣ ತೀವ್ರವಾಗುತ್ತಿರುವ ನಡುವೆಯೇ, ಭಾರತ ಉಕ್ರೇನ್ ದೇಶದಲ್ಲಿದ್ದ ತನ್ನ ಎಲ್ಲಾ ನಾಗರಿಕರನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತಂದಿದೆ. ಆಪರೇಷನ್ ಗಂಗಾ (Operation ganga) ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತ ಹಲವಾರು ದಿಕ್ಕುಗಳಿಂದ ಸಹಾಯ ಪಡೆದುಕೊಂಡಿತು.

ಅದರಲ್ಲೂ ಕಾರ್ಯಾಚರಣೆಯ ಕೊನೇ ಹಂತದಲ್ಲಿ ಸುಮಿಯಲ್ಲಿ (Sumy) ಸಿಲುಕಿದ್ದ 694 ಭಾರತೀಯ ನಾಗರೀಕರನ್ನು ರಕ್ಷಣೆ ಮಾಡುವುದು ಸವಾಲಾಗಿ ಪರಿಣಮಿಸಿತ್ತು.ಈ ಹಂತದಲ್ಲಿ ಪೋಲೆಂಡ್ ಗಡಿಯಲ್ಲಿದ್ದ ಭಾರತೀಯ ಪ್ರಜೆಗಳ ಸಂಘಟನೆ ಸೇವಾ ಯುರೋಪ್ ನೆರವಿಗೆ ಬಂದಿತ್ತು. ಯುರೋಪ್ ನ ಕೆಲ ದೇಶಗಳಲ್ಲಿ ನೆಲೆಸಿರುವ ಸಮಾನ ಮನಸ್ಕ ಭಾರತೀಯರು ಜತೆಗೂಡಿ ಸುಮಿಯಿಂದ ಹೊರಬಂದು, ಪೋಲೆಂಡ್ ಗಡಿ ತಲುಪುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಸಹಾಯ ಮಾಡಿದರು.

Operation Ganga : ಹಿಮದ ನೀರು ಕುಡಿದು ಬದುಕಿದ್ದೇವೆ!
ಭಾರತೀಯ ರಾಯಭಾರಿ ಕಚೇರಿ ಎಲ್ಲಾ ವ್ಯವಸ್ಥೆಗಳನ್ನು ಉತ್ತಮವಾಗಿ ಮಾಡುತ್ತಿದೆ. ಆದರೆ, ವಿದ್ಯಾರ್ಥಿಗಳು ಸುಮಿಯಿಂದ ಇಲ್ಲಿಗೆ ಬರುವುದೇ ದೊಡ್ಡ ಸಾಹಸವಾಗಿದೆ. ಇಲ್ಲಿಗೆ ಬಂದ ವಿದ್ಯಾರ್ಥಿಗಳಿಗೆ ಆಹಾರ, ನೀರು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಪೋಲೆಂಡ್ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಣೆ ಮೂಲದ ಗುಣೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video