
ರೂಪಾಯಿ ಚಿಹ್ನೆ ತೆಗೆದು ಪೇಚಿಗೆ ಸಿಲುಕಿದ ತಮಿಳುನಾಡು ಡಿಎಂಕೆ
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ, ದೂರು ಹೇಳಬೇಡಿ, ಬರೆದುಕೊಡಿ, ಬಿಜೆಪಿ ಬಂಡಾಯ ನಾಯಕರಿಗೆ ಸೂಚನೆ, ಹೈಕಮಾಂಡ್‌ನಿಂದ ರಾಜ್ಯ ಬಿಜೆಪಿ ನಾಯಕರಿಗೆ ವಾರ್ನಿಂಗ್, ದುಬೈನಿಂದ ಭಾರತಕ್ಕೆ ಚಿನ್ನ ಕಳ್ಳಾಸಾಗಾಣಿಕೆ ಮಾಡುವುದೇಕೆ?
ತಮಿಳುನಾಡು ಡಿಎಂಕೆ ಸರ್ಕಾರ ಬಜೆಟ್‌ನಲ್ಲಿ ರೂಪಾಯಿ ಚಿಹ್ನೆ ತೆಗೆದು ಹಾಕಿ ಭಾರಿ ಕೋಲಾಹಲ ಸೃಷ್ಟಿಸಿದೆ. ಇದೀಗ ಈ ನಡೆಯಿಂದ ಡಿಎಂಕೆ ಸರ್ಕಾರ ಪೇಚಿಗೆ ಸಿಲುಕಿದೆ. ಭಾರತದ ರೂಪಾಯಿ ಚಿಹ್ನೆ ಹಿಂದಿಯ ಮೂಲ ದೇವನಾಗರಿ ಲಿಪಿಯಲ್ಲಿದೆ ಎಂದು ತೆಗೆದುಹಾಕಿದೆ. ಆದರೆ ಈ ಚಿಹ್ನೆಯನ್ನು ರಚಿಸಿದ್ದು ಡಿಎಂಕೆ ಶಾಸಕನ ಪುತ್ರ ಉದಯ್ ಕುಮಾರ್. 2010ರಲ್ಲಿ ಮನ್‌ಮೋಹನ್ ಸಿಂಗ್ ಸರ್ಕಾರ ಈ ಚಿಹ್ನೆಯನ್ನು ಅಂತಿಮಗೊಳಿಸಿತ್ತು. ಇದೀಗ ಡಿಎಂಕೆ ಮೋದಿ ಸರ್ಕಾರವನ್ನು ವಿರೋಧಿಸುವ ನಿಟ್ಟಿನಲ್ಲಿ ರೂಪಾಯಿ ಚಿಹ್ನೆ ತೆಗೆದು ಪೇಚಿಗೆ ಸಿಲುಕಿದೆ.