ಸಿನೆಮಾ ಸ್ಟೈಲ್‌ನಲ್ಲಿ ರೌಡಿ ಎಂಟ್ರಿ : ಬಸ್ ನಿಲ್ಲಿಸಿ ಚಾಲಕನ ಮೇಲೆ ಅಟ್ಯಾಕ್!
- ಬಸ್ ಅಡ್ಡಗಟ್ಟಿ ಕಾರು ಚಾಲಕನ ಹಲ್ಲೆ
- ಕಾರನ್ನು ಓವರ್ ಟೇಕ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಕಿಡಿಗೇಡಿಗಳು
- ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕೆಜಿಎಫ್2 ಸಿನಿಮಾ ಹವಾ ಎಲ್ಲೆಡೆ ಕ್ರೇಜ್ ಸೃಷ್ಟಿಸಿದೆ. ಕೆಲ ರೌಡಿಗಳು ತಮ್ಮನ್ನು ರಾಕಿ ಭಾಯ್‌ಗೆ ಹೋಲಿಕೆ ಮಾಡಿಕೊಂಡು ನಿಜ ಜೀವನದಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಕಾರ್ ಓವರ್ ಟೇಕ್ ಮಾಡಿದ ಎಂದು ರೌಡಿಯೊಬ್ಬ ಬಸ್‌ನ್ನು ನಿಲ್ಲಿಸಿ ಚಾಲಕನ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಖಾಸಗಿ ಬಸ್ಸೊಂದು ತನ್ನ ಪಾಡಿಗೆ ತಾನು ಹೋಗುತ್ತಿದೆ. ಈ ವೇಳೆ ಈ ಬಸ್‌ನ್ನು ಹಿಂದಿಕ್ಕಿದ ಆಡಿ ಕಾರು (Audi car) ಬಸ್ ಅಡ್ಡಗಟ್ಟಿ ಬಸ್ ಮುಂದೆಯೇ ಕಾರನ್ನು ನಿಲ್ಲಿಸಲಾಗಿದೆ. ಬಳಿಕ ಕಾರಿನಿಂದ ಇಳಿದು ಬಂದ ರೌಡಿಗಳು ಏಕಾಏಕಿ ಬಸ್ ಚಾಲಕನ (Bus driver)ಮೇಲೆ ಹಲ್ಲೆ ಮಾಡಿದ್ದಾರೆ.