Ayodhya Ram Mandir: ರಾಮ ಮಂದಿರದ ಒಳಗೆ ಹೋಗಲು ಇರುವ ನಿರ್ಬಂಧಗಳೇನು ? ರಾಮಲಲ್ಲಾ ದರ್ಶನ ಪಡೆಯುವುದು ಹೇಗೆ ?
ಇಂದಿನಿಂದ ರಾಮಲ್ಲಲ್ಲಾನ ನೋಡಲು ಭಕ್ತರಿಗೆ ಅವಕಾಶ
ಅಯೋಧ್ಯೆ ಮಂದಿರದಲ್ಲಿ ದೀಪಲಂಕಾರ, ಲೇಸರ್ ಶೋ
ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಮಂದಿರ ಹೊರನೋಟ
ರಾಮನೂರಲ್ಲಿ ರಾಮನ ಆಗಮನ ಆಗಿದೆ. ಸೋಮವಾರ ರಾಮಲಲ್ಲಾನಿಗೆ(Ramlalla idol) ಪ್ರಾಣಪ್ರತಿಷ್ಠಾಪನೆ ನಡೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ವಿವಿಧ ಕ್ಷೇತ್ರದ ದಿಗ್ಗಜರು, ಸಾವಿರಾರು ಹನಿಯರು ಸಾಕ್ಷಿಯಾದ್ರು. ಸಿನಿಮಾ, ರಾಜಕೀಯ ಸೇರಿ ವಿವಿಧ ಕ್ಷೇತ್ರದ ಗಣ್ಯರು ರಾಮನ ದರ್ಶನ ಪಡೆದ್ರು. ಇವರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಅಯೋಧ್ಯೆ ಪಟ್ಟಾಭಿಷೇಕದಲ್ಲಿ ಭಾಗಿಯಾಗಿದ್ರು. ಬೆಳಗ್ಗೆ 7 ಗಂಟೆಯಿಂದ ರಾಮಲಲ್ಲಾ ಸಾರ್ವಜನಿಕರ ದರ್ಶನಕ್ಕೆ ಮುಕ್ತನಾಗಿದ್ದು, ಜಾನಕಿ ವಲ್ಲಭನ ದರ್ಶನಕ್ಕೆ ರಾಮಭಕ್ತರು ದೌಡಾಯಿಸುತ್ತಿದ್ದಾರೆ. ಪ್ರಭು ರಾಮನ(Sri Ram) ದರ್ಶನ ಸಮಯ ಬೆಳಗ್ಗೆ 7:00 ರಿಂದ 11:30 ಮತ್ತು ಮಧ್ಯಾಹ್ನ 2:00 ರಿಂದ ಸಂಜೆ 7:00 ರವರೆಗೆ ದರ್ಶನಕ್ಕೆ ಅವಕಾಶ ಇದೆ.
ಇದನ್ನೂ ವೀಕ್ಷಿಸಿ: Ram Mandir: 500 ವರ್ಷಗಳ ಬಳಿಕ ಧರೆಗಿಳಿದ ಬಾಲರಾಮ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ರಾಮ ಜಪ