ಹಮಾಸ್ ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ? ಈ ಯುದ್ಧಕ್ಕೆ ಕಾರಣವೇನು ?

ಹಮಾಸ್‌ಗೆ ಎಚ್ಚರಿಕೆ ಕೊಟ್ಟ ಇಸ್ರೇಲ್ ಸರ್ಕಾರದ ಇಂಧನ ಸಚಿವ
ಒತ್ತೆಯಾಳು ಬಿಡುಗಡೆ ಮಾಡದಿದ್ರೆ ಸುಮ್ಮನಿರಲ್ಲ ಎಂದ ಇಸ್ರೇಲ್
ನೀರು ಶುದ್ಧಿಕರಣ ಘಟಕವನ್ನೇ ಉಡಾಯಿಸಿರೋ ಇಸ್ರೇಲ್ ಸೇನೆ
 

First Published Oct 13, 2023, 12:05 PM IST | Last Updated Oct 13, 2023, 12:05 PM IST

ಪ್ಯಾಲೆಸ್ತೀನ್ ಶರಣಾಗತಿಗೆ ಇಸ್ರೇಲ್ (Israel) ಸೇನೆ ರಣತಂತ್ರವನ್ನು ಹೆಣೆದಿದೆ. ಗಾಜಾ ಪಟ್ಟಿ(Gaza Strip) ನುಗ್ಗದೇ ಉಗ್ರರನ್ನ ಬಗ್ಗುಬಡಿಯಲು ಇಸ್ರೇಲ್ ಪ್ಲ್ಯಾನ್ ಮಾಡಿಕೊಂಡಿದೆ. ಗಾಜಾಪಟ್ಟಿಗೆ ನುಗ್ಗಿದ್ರೆ ಮತ್ತಷ್ಟು ಹಿಂಸಾಚಾರವಾಗುವ ಸಾಧ್ಯತೆ ಇದೆ. ಗಡಿ ಬಂದ್ ಮಾಡಿ ಆಹಾರ, ನೀರು, ವಿದ್ಯುತ್ ಕಡಿತ ಮಾಡಲಾಗಿದ್ದು, ಈಗಾಗಲೇ ಗಾಜಾಪಟ್ಟಿಯಲ್ಲಿ ಆಹಾರ, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನೆರಡು ದಿನ ಕಳೆದ್ರೆ ಪ್ಯಾಲೆಸ್ತೀನಿಯನ್ನರೇ(Palestine) ಶರಣಾಗಬಹುದು. ಈ ಮಧ್ಯೆ ನಿರಂತರ ಬಾಂಬ್ ದಾಳಿ ಮಾಡ್ತಿರುವ ಇಸ್ರೇಲ್ ಸೇನೆ, ಈಜಿಪ್ಟ್‌ ಗಡಿ ತೆರೆಯದಂತೆ ಕಟ್ಟಪ್ಪಣೆ ಮಾಡಿದೆ. ಗಾಜಾ ಪಟ್ಟಿಯನ್ನ ಅಘೋಷಿತ ಜೈಲನ್ನಾಗಿ ಇಸ್ರೇಲ್ ಸೇನೆ ಮಾಡಿದೆ. ಗಾಜಾ ಪಟ್ಟಿಯನ್ನ ಎಲ್ಲಾ ಕಡೆಯಿಂದ ಸೈನಿಕರು ಸುತ್ತುವರೆದಿದ್ದಾರೆ. ಒತ್ತೆಯಾಳು ಬಿಡುಗಡೆ ಆಗೋವರೆಗೂ ವಿದ್ಯುತ್, ಆಹಾರ ಕೊಡಲ್ಲ ಎಂದು ಇಸ್ರೇಲ್‌ ಹೇಳಿದೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಗ್ ರಿಲೀಫ್: ನಡ್ಡಾ ಕೇಸ್‌ಗೆ ಧಾರವಾಡ ಕೋರ್ಟ್ ಮಧ್ಯಂತರ ತಡೆ