ಗುಜರಾತ್ ತೂಗು ಸೇತುವೆ ಕುಸಿತ 130 ಮೀರಿದ ಮೃತರ ಸಂಖ್ಯೆ! ಕುಸಿತಕ್ಕೆ ಕಾರಣ ಏನು?

ಗುಜರಾತ್‌ನ ಮೊರ್ಬಿ ತೂಗು ಸೇತುವೆ ಕುಸಿತ ಪ್ರಕರಣಕ್ಕೆ ಕಾರಣವೇನು..? ಈ ಘಟನೆ ನಿಜಕ್ಕೂ ನಡೆದಿದ್ದು ಹೇಗೆ ಎಂಬ ಬಗ್ಗೆ ವಿಡಿಯೋದಲ್ಲಿದೆ ವಿವರ..

Share this Video
  • FB
  • Linkdin
  • Whatsapp

ಗುಜರಾತ್‌ನ ಮೊರ್ಬಿ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ ನೂರಾರು ಜನರು ಬಲಿಯಾಗಿದ್ದಾರೆ. ಭಾನುವಾರ ಸಂಜೆ ನಡೆದ ಘಟನೆಯಲ್ಲಿ ಮಚ್ಚು ನದಿಗೆ ಜನರು ಬಿದ್ದಿದ್ದು, ಅವಘಡ ಸಂಭವಿಸಿದೆ. ಘಟನೆ ನಡೆದ ವೇಳೆ ಸೇತುವೆ ಮೇಲೆ 500ಕ್ಕೂ ಹೆಚ್ಚು ಜನರು ಇದ್ದರು ಎಂದು ವರದಿಯಾಗಿದ್ದು, ಇದ್ದಕ್ಕಿದ್ದಂತೆ ಸೇತುವೆ ಕುಸಿದು ಬಿದ್ದಿದೆ. 140 ವರ್ಷಗಳ ಹಿಂದೆ ನಿರ್ಮಿಸಿದ್ದ ಹಳೆಯ ಸೇತುವೆ ಇದಾಗಿದ್ದು, 5 ದಿನಗಳ ಹಿಂದಷ್ಟೇ ನವೀಕರಣ ಕಾರ್ಯ ನಡೆದ ಬಳಿಕ ತೆರೆಯಲಾಗಿತ್ತು ಎಂದು ತಿಳಿದುಬಂದಿದೆ. 30 ಮಕ್ಕಳು ಸೇರಿ 132 ಜನರು ಬಲಿಯಾಗಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಇನ್ನು, ಈ ಸೇತುವೆ ಕುಸಿತ ಪ್ರಕರಣಕ್ಕೆ ಕಾರಣವೇನು..? ಈ ಘಟನೆ ನಿಜಕ್ಕೂ ನಡೆದಿದ್ದು ಹೇಗೆ ಎಂಬ ಬಗ್ಗೆ ವಿಡಿಯೋದಲ್ಲಿದೆ ವಿವರ..

Related Video