'ಲೋಕ' ಸಮರಕ್ಕೂ ಮುನ್ನ ಶ್ರೀರಾಮನ ಪ್ರತಿಷ್ಠಾಪನೆ !

ಅಯೋಧ್ಯೆ ದೇಗುಲ ನಿರ್ಮಾಣ ಸಮಿತಿ ಉಸ್ತುವಾರಿ ನೃಪೇಂದ್ರ ಮಿಶ್ರಾ ಜೊತೆ ಏಷ್ಯಾನೆಟ್‌ ಗ್ರೂಪ್‌ನ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ಸಂದರ್ಶನ ನಡೆಸಿದ್ದಾರೆ. ನೃಪೇಂದ್ರ ಮಿಶ್ರಾ ಜೊತೆ ನಡೆಸಿದ ಸಂಪೂರ್ಣ ಸಂದರ್ಶನ ಇಲ್ಲಿದೆ..
 

First Published Sep 1, 2023, 1:35 PM IST | Last Updated Sep 1, 2023, 1:35 PM IST

ರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿ ಇದೆ. ಅಯೋಧ್ಯೆಯಲ್ಲಿ ಶ್ರೀರಾಮನ(Sri Ram) ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿದೆ. ಈ ದೇಗುಲದ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. 2024ರ ಜನವರಿಯಲ್ಲಿ ಶ್ರೀರಾಮನ ದೇಗುಲ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ. ಈ ಮೂಲಕ ಕೋಟ್ಯಾಂತರ ಹಿಂದೂಗಳ ಕನಸು ನನಸಾಗುವ ಕ್ಷಣ ಹತ್ತಿರದಲ್ಲೇ ಇದೆ ಎಂದು ಹೇಳಬಹುದು. ಜನವರಿ 14ರಿಂದ 24ರ ಮಧ್ಯೆ ದೇಗುಲದಲ್ಲಿ ಅಂತಿಮ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ(Narendra Modi) ಸಮ್ಮುಖದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಅಂತಿಮ ಪ್ರಾಣ ಪ್ರತಿಷ್ಠಾಪನೆ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಅಯೋಧ್ಯೆ(Ayodhya) ದೇಗುಲ ನಿರ್ಮಾಣ ಉಸ್ತುವಾರಿ ನೃಪೇಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ:  10 ಲಕ್ಷ ಕೊಟ್ರೆ MSME ಕೌನ್ಸಿಲ್ ಚೇರ್ಮನ್ ಹುದ್ದೆ ! ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ ಖತರ್ನಾಕ್ ಗ್ಯಾಂಗ್ !

Video Top Stories