Left Right & Centre: ರಾಜಪಥ ಇನ್ಮುಂದೆ ಕರ್ತವ್ಯಪಥ! ಏನಿದರ ಮರ್ಮ?

ಮೋದಿ ಕಾಲದಲ್ಲಿ ಗುಮಾಮಗಿರಿ ಸಂಕೇತಕ್ಕೆ ಬ್ರೇಕ್‌ ಬಿದ್ದಿದೆ. ಇನ್ನು ಗುಲಾಮಗಿರಿಯ ಸಂಕೇತಗಳಿಗೆ ಉಳಿಗಾಲವಿಲ್ಲ. 

First Published Sep 8, 2022, 11:08 PM IST | Last Updated Sep 8, 2022, 11:08 PM IST

ಬೆಂಗಳೂರು(ಸೆ.09):  ಸೆಂಟ್ರಲ್‌ ವಿಸ್ತಾ ಅವೆನ್ಯೂ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಗುರುವಾರ) ಲೋಕಾರ್ಪಣೆಗೊಳಿಸಿದ್ದಾರೆ. ವಸಾಹತು ಮನಸ್ಥಿತಿಯನ್ನ ಕಳಚಿ ಮುಂದೆ ಸಾಗುವ ಮತ್ತೊಂದು ಪ್ರಕ್ರಿಯೆ ಭಾಗವಾಗಿದೆ. ಈ ಮೂಲಕ ಮೋದಿ ಕಾಲದಲ್ಲಿ ಗುಮಾಮಗಿರಿ ಸಂಕೇತಕ್ಕೆ ಬ್ರೇಕ್‌ ಬಿದ್ದಿದೆ. ಇನ್ನು ಗುಲಾಮಗಿರಿಯ ಸಂಕೇತಗಳಿಗೆ ಉಳಿಗಾಲವಿಲ್ಲ. 20 ತಿಂಗಳ ಹಿಂದೆ ಇದರ ಕಾಮಗಾರಿ ಶುರುವಾಗಿತ್ತು, 477 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯಾಗಿದೆ. ಜತೆಗೆ ಇಂಡಿಯಾ ಗೇಟ್‌ನಲ್ಲಿ 28 ಅಡಿ ಎತ್ತರ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಅವರ ಪ್ರತಿಮೆ ಕೂಡ ಅನಾವರಣಗೊಂಡಿದೆ. ನಾಳೆಯಿಂದ ಕರ್ತವ್ಯ ಪಥ ಸಾರ್ವಜನಿಕರಿಗೆ ಮುಕ್ತವಾಗಲಿದೆ.

News Hour: ಗುಲಾಮಗಿರಿಯ ಕುರುಹು ಅಳಿಸಿದ ಮೋದಿ ಕನಸಿನ ಯೋಜನೆಯ ಲೋಕಾರ್ಪಣೆ!