Asianet Suvarna News Asianet Suvarna News

Rajasthan Politicsನಲ್ಲಿ ಗೆಹ್ಲೋಟ್ ಶಕ್ತಿ ಎಂಥದ್ದು? ರಬ್ಬರ್‌ಸ್ಟಾಂಪ್ ಅಂದ್ಕೊಂಡ್ರೆ ರೆಬೆಲ್‌ಸ್ಟಾರ್ ಆದ್ರಲ್ಲಾ?

ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಸೋನಿಯಾ ಗಾಂಧಿಯವರ ರಬ್ಬರ್ ಸ್ಟಾಂಪ್‌ ಎಂದು ಹಲವರು ಅಂದುಕೊಂಡಿದ್ರು. ಆದರೆ, ಅಶೋಕ್‌ ಗೆಹ್ಲೋಟ್‌ ಈಗ ರೆಬೆಲ್‌ ಸ್ಟಾರ್‌ ಆಗಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿದೆ ವಿವರ..

Sep 28, 2022, 12:23 PM IST

ರಾಜಸ್ಥಾನದ ಹಳೆ ಹುಲಿ ಅಶೋಕ್‌ ಗೆಹ್ಲೋಟ್‌ ಗಾಂಧಿ ಕುಟುಂಬಕ್ಕೆ ಸಡ್ಡು ಹೊಡೆದಿದ್ದಾರೆ. ಇವರು ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಸೋನಿಯಾ ಗಾಂಧಿಯವರ ರಬ್ಬರ್ ಸ್ಟಾಂಪ್‌ ಎಂದು ಹಲವರು ಅಂದುಕೊಂಡಿದ್ರು. ಆದರೆ, ಅಶೋಕ್‌ ಗೆಹ್ಲೋಟ್‌ ಈಗ ರೆಬೆಲ್‌ ಸ್ಟಾರ್‌ ಆಗಿದ್ದಾರೆ. ಒಟ್ಟಾರೆ, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಬಿಕ್ಕಟ್ಟು ಕೈ ಹೈಕಮಾಂಡ್‌ಗೆ ಇಕ್ಕಟ್ಟಾಗಿ ಪರಿಣಮಿಸಿದೆ. ಅಶೋಕ್‌ ಗೆಹ್ಲೋಟ್‌ ತಾನು ಕಾಂಗ್ರೆಸ್‌ ಅಧ್ಯಕ್ಷನಾದರೂ ರಾಜಸ್ಥಾನ ಸಿಎಂ ಸ್ಥಾನ ಬಿಟ್ಟುಕೊಡಲ್ಲ ಎಂದು ಹೇಳಿದ್ದರು. ಅಲ್ಲದೆ, ಅನೇಕ ಷರತ್ತುಗಳನ್ನು ವಿಧಿಸಿದ್ದರು. ರಾಜಸ್ಥಾನ ರಾಜಕಾರಣದಲ್ಲಿ ಅಶೋಕ್ ಗೆಹ್ಲೋಟ್ ಶಕ್ತಿ ಎಂಥದ್ದು ಅಂತೀರಾ.. ಸುವರ್ಣ ಸ್ಪೆಷಲ್‌ನಲ್ಲಿದೆ ವಿವರ..