Asianet Suvarna News Asianet Suvarna News

ಹನಿಟ್ರ್ಯಾಪ್‌ ಆಗಿದ್ದ ‘ಪಾಕ್‌ ಗೂಢಚರ’ ಬೆಂಗ್ಳೂರಲ್ಲಿ ಸೆರೆ!

ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.

Sep 21, 2021, 11:54 AM IST

ಬೆಂಗಳೂರು(ಸೆ.21) ಆತನಿಗೆ ಸೇನೆ ಸೇರುವ ಬಯಕೆ. ಅದು ಈಡೇರಲಿಲ್ಲ. ಆದರೇನಂತೆ, ಸೇನಾ ಸಮವಸ್ತ್ರ ತೊಟ್ಟು ಫೇಸ್‌ಬುಕ್‌ನಲ್ಲಿ ಹಾಕಿ ಸೇನಾಧಿಕಾರಿಯ ಪೋಸು ಕೊಡುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಈತನ ದೌರ್ಬಲ್ಯ ತಿಳಿದ ‘ಯುವತಿ’ಯೊಬ್ಬಳು ಇವನನ್ನೇ ಖೆಡ್ಡಾಕ್ಕೆ ಕೆಡವಿದಳು.

ಪುಸಲಾಯಿಸಿ ಬೆಂಗಳೂರು, ರಾಜಸ್ಥಾನದ ಪ್ರಮುಖ ಸೇನಾನೆಲೆಗಳ ಫೋಟೋ ತೆಗೆಸಿ ‘ತರಿಸಿಕೊಂಡಳು’. ಹಾಗೆ ಆತನನ್ನು ಬಲೆಗೆ ಬೀಳಿಸಿಕೊಂಡದ್ದು ಯುವತಿ ಆಗಿರಲಿಲ್ಲ. ಅದು ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಆಗಿತ್ತು. ಬಹುಶಃ ಅದೂ ಕೂಡ ಈತನನ್ನು ಭಾರತದ ಸೇನಾಧಿಕಾರಿ ಎಂದು ತಿಳಿದು ಸೇನಾನೆಲೆಗಳ ಮಾಹಿತಿ ಸಂಗ್ರಹಕ್ಕೆ ಬಳಸಿಕೊಂಡಿತ್ತು.

ಇದರ ಸುಳಿವು ಸಿಕ್ಕ ಭಾರತೀಯ ಸೇನೆಯ ಗುಪ್ತಚರ ದಳ ತಕ್ಷಣ ಕಾರ‍್ಯಪ್ರವೃತ್ತವಾಗಿ ಬೆಂಗಳೂರು ಪೊಲೀಸರ ಮೂಲಕ ‘ಫೇಸ್‌ಬುಕ್‌ ಸೇನಾಧಿಕಾರಿ’ಯನ್ನು ಸೆರೆ ಹಿಡಿಸಿದೆ.