ರೈತರೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿದ ರಾಹುಲ್ ಗಾಂಧಿ!

ತಮಿಳುನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಳ್ಳಿಯ ಜನರೊಂದಿಗೆ ತೋಟದ ಮಧ್ಯೆ ಕುಳಿತು ಊಟ ಮಾಡಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. 

First Published Jan 30, 2021, 5:24 PM IST | Last Updated Jan 30, 2021, 5:26 PM IST

ಚೆನ್ನೈ(ಜ.30) ತಮಿಳುನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಳ್ಳಿಯ ಜನರೊಂದಿಗೆ ತೋಟದ ಮಧ್ಯೆ ಕುಳಿತು ಊಟ ಮಾಡಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. 

ಕೊಯಮುತ್ತೂರಿನಲ್ಲಿ ರಾಹುಲ್‌ ಗಾಂಧಿಗೆ ಭರ್ಜರಿ ಸ್ವಾಗತ

ತಮಿಳುನಾಡಿನ ಚಿನ್ನವೀರ ಮಂಗಲಂಗೆ ತೆರಳಿದ ರಾಹುಲ್ ಗಾಂಧಿ, ಹಳ್ಳಿಗರೊಂದಿಗೆ ಸ್ವಯಂ ಅಡುಗೆ ಮಾಡಿದ್ದಾರೆ. ಈರುಳ್ಳಿ ರಯ್ತಾ ಮಾಡಿ ಗಮನ ಸೆಳೆದಿದ್ದಾರೆ. ಬಳಿಕ ಸ್ಥಳೀಯರೊಂದಿಗೆ ನೆಲದ ಮೇಲೆ ಕುಳಿತು ಮಶ್ರೂಮ್ ಬಿರಿಯಾನಿ ಸವಿದಿದ್ದಾರೆ. 

ಯೂಟ್ಯೂಬ್‌ನಲ್ಲಿ ಅಪ್ಲೊಡ್‌ ಮಾಡಿರುವ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.