News Hour: ಭಾರತ್ ಜೋಡೋ ಬಳಿಕ ‘ಭಾರತ್ ನ್ಯಾಯ್ ಯಾತ್ರೆ’!


ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ 2.0 ಯಾತ್ರೆಗೆ ವೇದಿಕೆ ಸಿದ್ಧವಾಗಿದೆ. ಈ ಯಾತ್ರೆಯನ್ನು ಭಾರತ್‌ ನ್ಯಾಯ್‌ ಯಾತ್ರೆ ಎಂದು ಕರೆಯಲಾಗಿದೆ. ಇದು ಮಣಿಪುರದಿಂದ ಮುಂಬೈವರೆಗೆ ರಾಹುಲ್‌ ಗಾಂಧಿ ಯಾತ್ರೆ ಮಾಡಲಿದ್ದಾರೆ.
 

First Published Dec 27, 2023, 11:38 PM IST | Last Updated Dec 27, 2023, 11:38 PM IST

ನವದೆಹಲಿ (ಡಿ.27): ಕಳೆದ ವರ್ಷ ಸೆಪ್ಟೆಂಬರ್ 7 ರಂದು ಭಾರತ್ ಜೋಡೋ ಹೆಸರಲ್ಲಿ ರಾಹುಲ್ ಗಾಂಧಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4100 ಕಿಮೀ ಪಾದಯಾತ್ರೆ ನಡೆಸಿದ್ದರು. ಈ ಯಾತ್ರೆ 136 ದಿನ, 75 ಜಿಲ್ಲೆ, 12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಿತ್ತು.

ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ ಕಾಂಗ್ರೆಸ್ ಅಭೂತ ಪೂರ್ವ ಗೆಲುವಿಗೆ ಭಾರತ್ ಜೋಡೋ ಯಾತ್ರೆಯೇ ಕಾರಣ.. ಆದ್ರೆ ಈ ಪರಿಣಾಮ ಉತ್ತರ ಭಾರತದ ರಾಜ್ಯಗಳಲ್ಲಿ ಆಗಲಿಲ್ಲ.. ಹೀಗಾಗಿ ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತು.. ಆದ್ರೆ ಭಾರತ್ ಜೋಡೋ ಯಾತ್ರೆಗೆ ಹೋದಲೆಲ್ಲಾ ಭಾರಿ ಜನಬೆಂಬಲ ಸಿಕ್ಕಿತ್ತು.. ಹೀಗಾಗಿಯೇ ಲೋಕಸಭೆ ಸಮರಕ್ಕೂ ಮುನ್ನ ಮತ್ತೊಂದು ಯಾತ್ರೆಗೆ ರಾಹುಲ್ ಗಾಂಧಿ ಸಿದ್ಧರಾಗಿದ್ದಾರೆ. ಅದುವೇ ಭಾರತ್ ನ್ಯಾಯ್ ಯಾತ್ರೆ.

ಅರುಣಾಚಲ ಪ್ರದೇಶದಿಂದ ಗುಜರಾತ್, ಮತ್ತೆ ಆರಂಭಗೊಳ್ಳುತ್ತಿದೆ ಭಾರತ್ ಜೋಡೋ ಯಾತ್ರೆ!

ಭಾರತ್‌ ನ್ಯಾಯ್‌ ಯಾತ್ರೆ 66 ದಿನಗಳ ಕಾಲ ನಡೆಯಲಿದ್ದಯ, 6200 ಕಿಮೀ ಪಾದಯಾತ್ರೆ ಮಾಡಲಿದ್ದಾರೆ. 14 ರಾಜ್ಯ ಹಾಗೂ 85 ಜಿಲ್ಲೆಗಳನ್ನು ಇದು ದಾಟಲಿದೆ. ಅದರೊಂದಿಗೆ ಲೋಕ ಸಮರ ಗೆಲ್ಲುವ ನಿಟ್ಟಿನಲ್ಲಿ ರಾಹುಲ್‌ ಗಾಂಧಿ ಹೊಸ ತಾಲೀಮು ಆರಂಭವಾಗಿದೆ.