Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

ಎದುರಾಳಿ ಹೇಳಿಕೆಗಳೇ ಮೋದಿ ಪಾಳಯಕ್ಕೆ ‘ಶಕ್ತಿ’!
ಮೋದಿಗೆ ಬಿಟ್ಟ ಬಾಣಗಳೇ ಎದುರಾಳಿಗೆ ತಿರುಗುಬಾಣ!
ಏನು ಹೇಳಲು ಹೋಗಿ ಏನು ಹೇಳಿದ್ರು ರಾಹುಲ್ ಗಾಂಧಿ?

Share this Video
  • FB
  • Linkdin
  • Whatsapp

ರಾಜಕೀಯ ಯುದ್ಧರಂಗದಲ್ಲಿ ಶಕ್ತಿ(Shakti) ಆಯುಧ ಪ್ರಯೋಗವಾಗ್ತಾ ಇದೆ. ಈ ಅಸ್ತ್ರನಾ ಮೊದಲು ಬಳಸಿದ್ದೇ ರಾಹುಲ್ ಗಾಂಧಿ(Rahul Gandhi). ಆದ್ರೆ ಅವರು ಮಾತಾಡಿದ್ದು ಮೋದಿ ವಿರುದ್ಧವಲ್ಲ, ಸನಾತನ(Sanatana) ಧರ್ಮದ ವಿರುದ್ಧ ಅಂತ ಹೇಳ್ತಾ ಇದೆ, ಕೇಸರಿ ಸೇನೆ(BJP). ಅವತ್ತು ಚಾಯ್ ವಾಲಾ..ಚೌಕೀದಾರ್ ಚೋರ್ ಅಂದವರು, ಈಗ ಪರಿವಾರ. ಶಕ್ತಿ ಅನ್ನೋ ಪದ ಪ್ರಯೋಗ ಮಾಡಿದ್ದಾರೆ. ರಾಷ್ಟ್ರ ರಾಜಕಾರಣದ ಸಂಗ್ರಾಮ ಈಗ ಮತ್ತಷ್ಟು ರೋಚಕವಾಗಿದೆ. ರಾಜಕೀಯ ನಾಯಕರು, ಒಬ್ಬರ ವಿರುದ್ಧ ಮತ್ತೊಬ್ಬರು ಮಾತಿನ ಅಸ್ತ್ರ ಪ್ರಯೋಗ ಮಾಡ್ತಾ, ಮತಸಮರ ಗೆಲ್ಲೋ ಕನಸು ಕಾಣ್ತಾ ಇದಾರೆ. ಈಗ ಅಂಥದ್ದೇ ಮಾತಿನ ಯುದ್ಧ, ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಕಾಂಗ್ರೆಸ್(Congress) ಅಧಿನಾಯಕ, ರಾಹುಲ್ ಗಾಂಧಿ ಈ ಇಬ್ಬರ ಮಧ್ಯೆ ನಡೀತಿದೆ. ಹೀಗೆ ಅವಕಾಶ ಸಿಕ್ಕಾಗೆಲ್ಲಾ ಮೋದಿ ಅವರನ್ನ ಟೀಕಿಸ್ತಾ ರಾಹುಲ್ ಗಾಂಧಿ ಇರ್ತಾರೆ. ಆದ್ರೆ, ಈ ಸಲ ಅದೇ ಮಾತುಗಳನ್ನ ಮತ್ತೆ ಹೇಳಿರೋದು, ಮೋದಿ ಪಾಲಿಗೆ ಅಸ್ತ್ರವಾಗಿ ಬದಲಾಗಿದೆ ಅನ್ನೋ ಮಾತು ಕೇಳಿಬರ್ತಾ ಇದ್ಯಲ್ಲಾ, ಅದ್ಯಾಕೆ? ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ, ನೀವು ರಾಹುಲ್ ಗಾಂಧಿ ಅವರ ಮಾತನ್ನ ಪೂರ್ತಿಯಾಗಿ ಕೇಳ್ಬೇಕು.

ಇದನ್ನೂ ವೀಕ್ಷಿಸಿ: ಕಂದಮ್ಮಗಳ ಕತ್ತು ಕೊಯ್ದಿದ್ದಾರೂ ಯಾಕೆ ಆ ಪಾಪಿ..? ಆರೋಪಿ ಮುಸ್ಲಿಂ ಆಗಿದ್ದಕ್ಕೆ ಮುಗಿಸಿಬಿಟ್ಟರಾ..?

Related Video