ನಾನು ಸಾವರ್ಕರ್‌ ಅಲ್ಲ, ಗಾಂಧಿ ಯಾರಿಗೂ ಕ್ಷಮೆ ಕೇಳಲ್ಲ!

ಮೋದಿ ಸರ್‌ನೇಮ್‌ ಕೇಸ್‌ ವಿಚಾರದಲ್ಲಿ ಎಲ್ಲಾ ದಿಕ್ಕುಗಳಿಂದಲೂ ವಿರೋಧ ಎದುರಿಸುತ್ತಿರುವ ರಾಹುಲ್‌ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆ ಕೇಳೋದಿಲ್ಲ. ಕ್ಷಮೆ ಕೇಳೋಕೆ ನಾನು ಸಾವರ್ಕರ್‌ ಅಲ್ಲ ಎಂದಿದ್ದಾರೆ.
 

Share this Video
  • FB
  • Linkdin
  • Whatsapp

ನವದೆಹಲಿ (ಮಾ.25): ಮೋದಿ ಸರ್‌ನೇಮ್‌ ಹೊಂದಿರುವವರೆಲ್ಲಾ ಕಳ್ಳರೇ ಯಾಕಾಗಿರುತ್ತಾರೆ ಎನ್ನುವ ಹೇಳಿಕೆಗಾಗಿ ಸಂಸತ್‌ ಸದಸ್ಯ ಸ್ಥಾನದಿಮದ ಅನರ್ಹಗೊಂಡ ಕಾಂಗ್ರೆಸ್ ನಾಯಕ ಹಾಗೂ ವಯನಾಡ್‌ ಮಾಡಿ ಸಂದ ರಾಹುಲ್‌ ಗಾಂಧಿ ಶನಿವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಿದೇಶದಲ್ಲಿ ನೀವು ಈವರೆಗೂ ನೀಡಿರುವ ಹೇಳಿಕೆಗೆ ಹಾಗೂ ಇತ್ತೀಚಿನ ಹೇಳಿಕೆಗೆ ಕ್ಷಮೆ ಕೇಳ್ತೀರಾ ಅನ್ನೋ ಪ್ರಶ್ನೆಗೆ ಕ್ಷಮೆ ಕೇಳೋಕೆ ನಾನು ಸಾವರ್ಕರ್‌ ಅಲ್ಲ. ರಾಹುಲ್‌ ಗಾಂಧಿ. ಗಾಂಧಿ ಯಾರಲ್ಲೂ ಕ್ಷಮೆ ಕೇಳೋ ಮಾತೇ ಇಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

PM Modi In Karnataka: ಕಾರ್ಯಕರ್ತರಿಗೆ ಗೌರವ ನೀಡದವರು ಜನರಿಗೆ ಗೌರವ ನೀಡ್ತಾರಾ? ಮೋದಿ ಪ್ರಶ್ನೆ

ರಾಹುಲ್‌ ಗಾಂಧಿ ಸುದ್ದಿಗೋಷ್ಠಿಯಲ್ಲಿ ಮೋದಿ ಎನ್ನುವ ಹೆಸರನ್ನು 16 ಬಾರಿ ಹೇಳಿದರೆ ಪ್ರಧಾನಮಂತ್ರಿ ಎನ್ನುವ ಶಬ್ದವನ್ನು 9 ಬಾರಿ ಹಾಗು ಅದಾನಿ ಎನ್ನುವ ಹೆಸರನ್ನು 38 ಬಾರಿ ಪ್ರಸ್ತಾಪ ಮಾಡಿದ್ದಾರೆ.

Related Video