5 States Election: ಯೋಗಿ ಆದಿತ್ಯನಾಥ್ ಕುರ್ಚಿ ಭವಿಷ್ಯ ನಿರ್ಧಾರವಾಗೋದು ಇಲ್ಲಿ!

ಲೋಕಸಭಾ ಚುನಾವಣೆಯಲ್ಲಿ ಗೆದ್ದು, ದೆಹಲಿ ಗದ್ದುಗೆ ಏರಬೇಕಾದರೆ, ಮೋದಿಯವರಿಗೆ ಉತ್ತರ ಪ್ರದೇಶ ಹೇಗೆ ಮುಖ್ಯವೋ, ಉತ್ತರ ಪ್ರದೇಶ ಗದ್ದುಗೆ ಉಳಿಸಿಕೊಳ್ಳಲು ಯೋಗಿಗೆ ಪೂರ್ವಾಂಚಲ ಅಷ್ಟೇ ಮುಖ್ಯ. 

Share this Video
  • FB
  • Linkdin
  • Whatsapp

ಲೋಕಸಭಾ ಚುನಾವಣೆಯಲ್ಲಿ ಗೆದ್ದು, ದೆಹಲಿ ಗದ್ದುಗೆ ಏರಬೇಕಾದರೆ, ಮೋದಿಯವರಿಗೆ ಉತ್ತರ ಪ್ರದೇಶ ಹೇಗೆ ಮುಖ್ಯವೋ, ಉತ್ತರ ಪ್ರದೇಶ ಗದ್ದುಗೆ ಉಳಿಸಿಕೊಳ್ಳಲು ಯೋಗಿಗೆ ಪೂರ್ವಾಂಚಲ ಅಷ್ಟೇ ಮುಖ್ಯ. ಪೂರ್ವಾಂಚಲದಲ್ಲಿ ಯಾರು ಗೆಲುವು ಸಾಧಿಸ್ತಾರೋ, ಅವರಿಗೆ ಉತ್ತರದ ಗದ್ದುಗೆ ಸಿಗಲಿದೆ. ಇಲ್ಲಿ ಸುಮಾರು 156 ಕ್ಷೇತ್ರಗಳು, 26 ಜಿಲ್ಲೆಗಳು ಇಲ್ಲಿವೆ. 2017 ರ ಚುನಾವಣೆಯಲ್ಲಿ ಪೂರ್ವಾಂಚಲದಲ್ಲಿ ಬಿಜೆಪಿ 106 ಕ್ಷೇತ್ರಗಳನ್ನು ಗೆದ್ದಿತ್ತು. ಹೀಗಾಗಿ ಪೂರ್ವಾಂಚಲದಲ್ಲಿ ಅತೀ ಹೆಚ್ಚು ಸೀಟು ಪಡೆಯಲು ಬಿಜೆಪಿ ಸರ್ಕಸ್ ಮಾಡುತ್ತಿದೆ. 

UP Elections: ಸಿಎಂ ಯೋಗಿ ಆದಿತ್ಯನಾಥ್ ಪರ ನಿಂತಿದೆ ಮುಸ್ಲಿಂ ಸಮುದಾಯ!

ಪಂಚರಾಜ್ಯಗಳ ವಿಧಾನ ಸಭಾ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಉತ್ತರ ಪ್ರದೇಶ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. 403 ಸೀಟುಗಳ ಇರುವ ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇ​ಶ​ದಲ್ಲಿ ಸಮಾಜವಾದಿ ಪಕ್ಷ ಮತ್ತು ಉತ್ತ​ರಾ​ಖಂಡ್‌​ನಲ್ಲಿ ಕಾಂಗ್ರೆ​ಸ್‌​ನಿಂದ ಆಡ​ಳಿ​ತಾ​ರೂಢ ಬಿಜೆ​ಪಿಗೆ ಭಾರೀ ಪೈಪೋಟಿ ಎದು​ರಾ​ಗುವ ಹೊರ​ತಾ​ಗಿಯೂ, ಈ ಎರಡೂ ರಾಜ್ಯ​ಗ​ಳಲ್ಲಿ ಬಿಜೆಪಿ ಅಧಿ​ಕಾ​ರದ ಗದ್ದು​ಗೆಗೆ ಏರ​ಲಿದೆ ಎಂದು ಇಂಡಿಯಾ ನ್ಯೂಸ್‌-ಜನ್‌ ಕೀ ಬಾತ್‌ ಸಮೀಕ್ಷೆ ಭವಿಷ್ಯ ನುಡಿ​ದಿದೆ. 

Related Video