ಕಳೆದೋಗಿದೆ ಪುರಿ ಜಗನ್ನಾಥ ರತ್ನಭಂಡಾರ ಕೀಲಿ ಕೈ.. ಆದ್ರೂ ಓಪನ್‌ ಆಗುತ್ತೆ ಬಾಗಿಲು ಹೇಗೆ ಗೊತ್ತಾ ?

ಸಾಕಷ್ಟು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರೋ ಪುರಿ ಜಗನ್ನಾಥ ದೇವಾಲಯದ ರತ್ನಭಂಡಾರವನ್ನು ಇಂದು ಓಪನ್‌ ಮಾಡಲಾಗುತ್ತಿದೆ.
 

First Published Jul 14, 2024, 8:48 AM IST | Last Updated Jul 14, 2024, 8:48 AM IST

46 ವರ್ಷಗಳ ನಂತರ ಪುರಿ ಜಗನ್ನಾಥ ರತ್ನಭಂಡಾರ (Jagannath puri temple) ಓಪನ್‌ಗೆ ಕ್ಷಣಗಣನೆ ಶುರುವಾಗಿದೆ. ಸಾಕಷ್ಟು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರೋ ಪುರಿ ಜಗನ್ನಾಥ ದೇವಾಲಯ ವಿಸ್ಮಯಗಳಿಗೆ ಸಾಕ್ಷಿಯಾಗಿರೋದು ಅಂತೂ ಸತ್ಯ. ಅಷ್ಟೇ ಅಲ್ಲ ಊಹೆಗೂ ನಿಲುಕದಷ್ಟು ಧನಕನಕ, ಸಂಪತ್ತುಗಳು ಈ ದೇವಸ್ಥಾನದಲ್ಲಿದೆ. ಇಂಥಾ ದೇಗುಲದಲ್ಲಿನ ರತ್ನ ಭಂಡಾರದ(Ratna bhandar) ಬಾಗಿಲು ತೆರೆಯುತ್ತಿರೋದು ಭಾರೀ ಸುದ್ದಿಯಾಗ್ತಿದೆ. 4 ದಶಕದ ಬಳಿಕ ಅಂದರೆ ಬರೋಬ್ಬರಿ 46 ವರ್ಷಗಳ ಬಳಿಕ ನಕಲಿ ಕೀ ಬಳಸಿ ರತ್ನಭಂಡಾರದ ಕೋಣೆ ಬಾಗಿಲು ತೆರೆಯಲು ಸಿದ್ಧತೆ ನಡೆದಿದೆ. ಇತ್ತೀಚಿಗೆ ಒಡಿಶಾದ ಈಗಿನ ಸಿಎಂ  ಮೋಹನ್ ಚರಣ್ ಮಾಜ್ಹಿ(Mohan Charan Majhi) ಉನ್ನತ ಮಟ್ಟದ ಸಮಿತಿ ರಚಿಸಿದ್ರು, ಇಂದು ಭಂಡಾರ ತೆರೆಯಲಾಗುತ್ತಿದ್ದು, ಈ ಭಂಡಾರದಲ್ಲಿ ಅಮೂಲ್ಯ ಲೋಹಗಳು, ಅತೀ ಪುರಾತನ ಆಭರಣಗಳಿವೆ. ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳಿವೆ. ಇವುಗಳೆಲ್ಲವನ್ನೂ ಸಮಿತಿ ಲೆಕ್ಕ ಹಾಕಲಿದೆ. ರಾಜ್ಯ ಸರ್ಕಾರ ರಚಿಸಿರುವ 16 ಸದಸ್ಯರ ಉನ್ನತ ಮಟ್ಟದ ಸಮಿತಿಯು  ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಮೊದಲು ಜಗನ್ನಾಥನಿಗೆ ಪೂಜೆ ಮಾಡಿ ಭಂಡಾರವನ್ನು ಓಪನ್ ಮಾಡಲಿದೆ.  

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ವಾರಪೂರ್ತಿ ಸಂಗಾತಿ-ಸಾಲ ವಿಚಾರದಲ್ಲಿ ಅನಾನುಕೂಲವಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

Video Top Stories