ಆಸ್ಕರ್‌ ವಿಜೇತ ಎಲಿಫೆಂಟ್‌ ವಿಸ್ಪರ್ಸ್‌ನ ಬೊಮ್ಮಾ- ಬೆಳ್ಳಿಗೆ ಮೋದಿ ಸನ್ಮಾನ: ಪ್ರಧಾನಿಯಿಂದ ಕಾಡು ಕುರುಬರ ಭೇಟಿ

ಆಸ್ಕರ್‌ ವಿಜೇತ ಡಾಕ್ಯುಮೆಂಟರಿ ದಿ ಎಲೆಫೆಂಟ್ ವಿಸ್ಪರ್ಸ್‌ ಪ್ರಮುಖ ಪಾತ್ರಧಾರಿಗಳಾದ ಬೊಮ್ಮಾ ಮತ್ತು ಬೆಳ್ಳಿಯನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ಕಾಡುಕುರುಬರನ್ನು ಪ್ರಧಾನಿ ಭೇಟಿ ಮಾಡುತ್ತಿರುವುದು ಖುಷಿ ತಂದಿದೆ ಎಂದು ಬೊಮ್ಮಾ ಹೇಳಿದ್ದಾರೆ.

 

First Published Apr 6, 2023, 3:17 PM IST | Last Updated Apr 6, 2023, 3:17 PM IST

ಚಾಮರಾಜನಗರ (ಏ.06): ದಿ ಎಲೆಫೆಂಟ್ ವಿಸ್ಪರ್ಸ್‌ ಡಾಕ್ಯುಮೆಂಟರಿ ಪ್ರಮುಖ ಪಾತ್ರಧಾರಿಗಳಾದ ಬೊಮ್ಮಾ ಮತ್ತು ಬೆಳ್ಳಿಯನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್ ನಲ್ಲಿರುವ ಡಾಕ್ಯುಮೆಂಟರಿಯ ಪಾತ್ರಧಾರಿಗಳು. ಏ. 9ರಂದು ಬೊಮ್ಮಾ ಮತ್ತು ಬೆಳ್ಳಿ ಅವರು ಪ್ರಧಾನಿ ಮೋದಿಯಿಂದ ಏ.9ರಂದು ಸನ್ಮಾನ ಸ್ವೀಕರಿಸಲಿದ್ದಾರೆ. ಎಲ್ಲೋ ಇರುವ ಪ್ರಧಾನಿಗಳು ಕಾಡು ಕುರುಬರನ್ನ ಮಾತಾಡಿಸೋಕೆ ಬರ್ತಿರೋದು ಸಾಕಷ್ಟು ಖುಷಿ ತಂದಿದೆ. ಇಲ್ಲಿವರೆಗೆ ಯಾವುದೇ ಪ್ರಧಾನಿ ಮಧುಮಲೆ, ಬಂಡಿಪುರಕ್ಕೆ ಪ್ರಧಾನಿ ಬಂದಿಲ್ಲ. 

ಆಸ್ಕರ್ ಅಂದ್ರೆ ಏನಂತ ನನಗೆ ಗೊತ್ತಿಲ್ಲ. ಕಾಡೊಳಗೆ ಜೀವನ ಮಾಡುವ ನಮಗೆ ಈ ಡಾಕ್ಯುಮೆಂಟರಿ ಬಳಿಕ ಆಸ್ಕರ್ ನ ಪವರ್ ತಿಳಿಯಿತು. ನಮ್ಮ ದೇಶ ಸಂತೋಷ ಪಡುವ ಸಂಗತಿ ಇದು. ಪ್ರಧಾನಿ ಜೊತೆಗೆ ತಮಿಳುನಾಡು ಸಿಎಂ, ಮಿನಿಸ್ಟರ್ ಗಳು ಬರ್ತಿದ್ದಾರೆ. ಕಾಡುಜನಗಳಾದ ನಮಗೆ ಮನೆ ಕೊಡಬೇಕು, ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಬೇಕು. ಅವಕಾಶ ಸಿಕ್ಕರೆ ಪ್ರಧಾನಿ ಬಳಿ ಇದನ್ನೆಲ್ಲ ಕೇಳ್ತಿವಿ. ನಾನು ಹಿರೋ ಅಂತ ಭಾವಿಸಿಲ್ಲ. ಕಾಡು ಕುರುಬರು ಹೀಗೆ ಇರೋದು, ಹೀಗೆ ಇರ್ತಿವಿ. ನಿರ್ದೇಶಕಿ ಕಾರ್ತಿಕಿ ಗೊನ್ಸಾವೆಲ್ಸ್ ಆಸಕ್ತಿ ವಹಿಸಿ ಚಿತ್ರೀಕರಣ ಮಾಡಿದ್ದರು. ಡಾಕ್ಯುಮೆಂಟರಿ ಮಾಡ್ಬೇಕು ಅಂತ ಮನೆಗೆ ಬಂದಿದ್ದರು ಎಂದು ಎಲಿಫೆಂಟ್ ವಿಸ್ಪರ್ಸ್ ಡಾಕ್ಯುಮೆಂಟರಿಯ ಬೊಮ್ಮಾ ಹೇಳಿದ್ದಾರೆ.

Video Top Stories