ಪಿಎಂ ಮೋದಿ ಮನ್‌ ಕೀ ಬಾತ್: ಕೊರೋನಾ 'ಬಿರುಗಾಳಿ' ದೇಶವನ್ನೇ ನಡುಗಿಸಿದೆ!

'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಿಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಕೋವಿಡ್ ನಮ್ಮ ಧೈರ್ಯವನ್ನು ಪರೀಕ್ಷೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಮನ್ ಕೀ ಬಾತ್ ಮೂಲಕ ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ಕೊರೋನಾ 'ಬಿರುಗಾಳಿ' ದೇಶವನ್ನೇ ನಡುಗಿಸಿದೆ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ನವದೆಹಲಿ(ಏ.25)'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ ಕೋವಿಡ್ ನಮ್ಮ ಧೈರ್ಯವನ್ನು ಪರೀಕ್ಷೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಮನ್ ಕೀ ಬಾತ್ ಮೂಲಕ ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ಕೊರೋನಾ 'ಬಿರುಗಾಳಿ' ದೇಶವನ್ನೇ ನಡುಗಿಸಿದೆ ಎಂದಿದ್ದಾರೆ. 

ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮನ್ ಕಿ ಬಾತ್ ಸಭೆಯಲ್ಲಿ ಹಲವಾರು ವಿಭಾಗದ ತಜ್ಞರ ಜೊತೆ ಪ್ರಧಾನಿ ಚರ್ಚೆ ಮಾಡಿದ್ದಾರೆ. ಸಭೆಯಲ್ಲಿ ವೈದ್ಯಕೀಯ ವಿಭಾಗದವರು, ಆಕ್ಸಿಜನ್ ತಯಾರಿಕಾ ಸಂಸ್ಥೆಗಳ ಮುಖ್ಯಸ್ಥರು ಕೂಡ ಭಾಗಿಯಾಗಿದ್ದರು.

76ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಕೋವಿಡ್ -19 ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಮಯದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನಮ್ಮ ಪ್ರೀತಿಪಾತ್ರರಲ್ಲಿ ಅನೇಕರು ಕೋವಿಡ್ ನಿಂದ ತೀರಿಕೊಂಡಿದ್ದಾರೆ. ಕೋವಿಡ್ ಮೊದಲ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ, ರಾಷ್ಟ್ರದ ಸ್ಥೈರ್ಯ ವಿಶ್ವಾಸ ಹೆಚ್ಚಿದೆ. ಆದರೆ ಈ ಚಂಡಮಾರುತದಂತೆ ಇರುವ ಈ ಕೋವಿಡ್ ಎರಡನೇ ಅಲೆ ದೇಶವನ್ನು ಬೆಚ್ಚಿಬೀಳಿಸಿದೆ ಎಂದು ಮೋದಿ ತಿಳಿಸಿದ್ದಾರೆ.

Related Video