Asianet Suvarna News Asianet Suvarna News

ರಾಷ್ಟ್ರಪತಿ ಅಭ್ಯರ್ಥಿ: ಯಾರು ಈ ದ್ರೌಪದಿ ಮುರ್ಮು..? ಇವರೇ ಮೋದಿ ಆಯ್ಕೆ ಯಾಕೆ.?

ರಾಷ್ಟ್ರಪತಿ ಹಾಗೂ ಇತರ ಸಾಂವಿಧಾನಿಕ ಹುದ್ದೆಗಳ ಆಯ್ಕೆಯಲ್ಲಿ ಸದಾ ಅಚ್ಚರಿ ಮೂಡಿಸುವ ಬಿಜೆಪಿ, ಇದೇ ಮೊದಲ ಬಾರಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಮಹಿಳೆಯೊಬ್ಬರನ್ನು ಕಣಕ್ಕಿಳಿಸಿದೆ. 

Jun 23, 2022, 3:13 PM IST

ರಾಷ್ಟ್ರಪತಿ ಹಾಗೂ ಇತರ ಸಾಂವಿಧಾನಿಕ ಹುದ್ದೆಗಳ ಆಯ್ಕೆಯಲ್ಲಿ ಸದಾ ಅಚ್ಚರಿ ಮೂಡಿಸುವ ಬಿಜೆಪಿ, ಇದೇ ಮೊದಲ ಬಾರಿ ರಾಷ್ಟ್ರಪತಿ ಅಭ್ಯರ್ಥಿಯಾಗಿ (Presidential Candidate) ಬುಡಕಟ್ಟು ಮಹಿಳೆಯೊಬ್ಬರನ್ನು ಕಣಕ್ಕಿಳಿಸಿದೆ. ಸಂತಾಲ್‌ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ (Draupadi Murmu) ಬಡಕುಟುಂಬದಲ್ಲಿ ಹುಟ್ಟಿ, ಅತ್ಯಂತ ಕಷ್ಟದಲ್ಲೇ ಶಿಕ್ಷಣ ಪೂರೈಸಿದ್ದರು. ಬಳಿಕ ರೈರಂಗಪುರದ ಅರಬಿಂದೋ ಶಿಕ್ಷಣ ಸಂಸ್ಥೆಯಲ್ಲಿ ವೇತನ ಪಡೆಯದೇ ಮಕ್ಕಳಿಗೆ ಶಿಕ್ಷಣ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಪತನದತ್ತ 'ಮಹಾ' ಸರ್ಕಾರ; ಲೋಕನಾಥ್ ಶಿಂಧೆ ಬಂಡಾಯಕ್ಕೆ ಕಾರಣಗಳೇನು?

ಒಡಿಶಾದಲ್ಲಿ ಬಿಜೆಪಿ ಹಾಗೂ ಬಿಜು ಜನತಾದಳದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ, ದ್ರೌಪದಿ ವಾಣಿಜ್ಯ ಹಾಗೂ ಸಾರಿಗೆ ಸಚಿವಾಲಯದ ಸ್ವತಂತ್ರ್ಯ ಉಸ್ತುವಾರಿ ರಾಜ್ಯ ಸಚಿವೆಯಾಗಿ, ನಂತರ ಮೀನುಗಾರಿಕೆ, ಪ್ರಾಣಿ ಸಂಪನ್ಮೂಲ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. 2000- 2004ರ ಅವಧಿಯಲ್ಲಿ ರೈರಂಗಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಬಳಿಕ ಜಾರ್ಖಂಡದ 9ನೇ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಿದ್ದಾರೆ.  

ಇಂತಹ ಪ್ರಧಾನಿ ಸಿಕ್ಕಿದ್ದು ಈ ದೇಶದ ಸುದೈವ; ಮೋದಿಗೆ ಸಿದ್ದೇಶ್ವರ ಶ್ರೀಗಳ ಹಾರೈಕೆ

‘ದ್ರೌಪದಿ ಅವರು ಆದಿವಾಸಿ ಮಹಿಳೆಯಾಗಿದ್ದಾರೆ. ಹೀಗಾಗಿ ಆದಿವಾಸಿ ಮತಗಳು ಹೆಚ್ಚಿರುವ ಜಾರ್ಖಂಡ್‌, ಒಡಿಶಾ, ಮಹಾರಾಷ್ಟ್ರ, ಛತ್ತೀಸ್‌ಗಢ, ಈಶಾನ್ಯ- ಮೊದಲಾದ ರಾಜ್ಯಗಳ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಬಿಜೆಪಿಯ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಮಂತ್ರದ ಭಾಗವೂ ಇದು ಹೌದು. ಅದರಲ್ಲೂ, ಒಡಿಶಾದಲ್ಲಿ ಕಾಂಗ್ರೆಸ್ಸನ್ನು ಬದಿಗೆ ಸರಿಸಿರುವ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಮಹದೋದ್ದೇಶ ಹೊಂದಿದೆ. ಹೀಗಾಗಿ ಒಡಿಶಾ ಚುನಾವಣೆ ಮೇಲೆ ದ್ರೌಪದಿ ಆಯ್ಕೆ ಬಿಜೆಪಿಗೆ ನೆರವಾಗಲಿದೆ ಎಂದು ’ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Video Top Stories