Asianet Suvarna News Asianet Suvarna News

ಪತನದತ್ತ 'ಮಹಾ' ಸರ್ಕಾರ; ಏಕನಾಥ್ ಶಿಂಧೆ ಬಂಡಾಯಕ್ಕೆ ಕಾರಣಗಳೇನು?

ಶಿವಸೇನೆಯ ಸಚಿವ ಏಕಾನಾಥ್‌ ಶಿಂಧೆ (Eknath Shinde) ತನ್ನೊಂದಿಗೆ ಶಾಸಕರನ್ನು ಕರೆದುಕೊಂಡು ಹೋಗಿ ಬಂಡಾಯವೆದ್ದಿರುವುದು ಪಕ್ಷಕ್ಕೆ ಅಧಿಕಾರ ಕಳೆದುಕೊಳ್ಳುವ ಭೀತಿ ಉಂಟುಮಾಡಿದೆ. ಕಾಂಗ್ರೆಸ್‌, ಎನ್‌ಸಿಪಿ ಮತ್ತು ಶಿವಸೇನೆಯ ಮೈತ್ರಿಯಾದ ಮಹಾವಿಕಾಸ ಅಘಾಡಿ (MVA) ಸರ್ಕಾರ ಬೀಳುವ ಪರಿಸ್ಥಿತಿಗೆ ತಲುಪಿದೆ. 

ಮಹಾ ಸರ್ಕಾರದಲ್ಲಿ ಬಿರುಗಾಳಿ, ರಾಜೀನಾಮೆ ಸೂಚನೆ ಬೆನ್ನಲ್ಲೇ ಸಿಎಂ ಅಧಿಕೃತ ನಿವಾಸ ಖಾಲಿ ಮಾಡಿದ ಠಾಕ್ರೆ!

‘ಬಂಡಾಯ ಶಾಸಕರು ಹೇಳಿದರೆ ನಾನು ರಾಜೀನಾಮೆ ನೀಡಲು ಸಿದ್ಧನಾಗಿದ್ದೇನೆ. ಆದರೆ ಎಲ್ಲೋ ಕುಳಿತು ರಾಜೀನಾಮೆಗೆ ಒತ್ತಾಯಿಸುತ್ತಿರುವ ಶಾಸಕರು ನನ್ನ ಮುಂದೆ ಬಂದು ರಾಜೀನಾಮೆಗೆ ಕೋರಬೇಕು. ಆಗ ಅದಕ್ಕೆ ಒಪ್ಪುವೆ’ ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಅಲ್ಲದೆ, ‘ಶಿವಸೈನಿಕನನ್ನೇ ಮುಂದಿನ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸುತ್ತೇನೆ’ ಎಂದೂ ಹೇಳಿದ್ದಾರೆ. 

ಏಕನಾಥ್‌ ಶಿಂಧೆ, ಹೀಗೆ ಬಂಡೇಳಲು ಕಾರಣವಾಗಿದ್ದು ದಿಢೀರ್‌ ಬೆಳವಣಿಗೆಯಲ್ಲ. ಬದಲಾಗಿ, ರಾಜಕೀಯದಲ್ಲಿ ಅವರು ಹೊಂದಿರುವ ಮಹತ್ವಕಾಂಕ್ಷೆ, ತಾವು ಹೊಂದಿದ್ದ ಖಾತೆ ನಿರ್ವಹಣೆಗೆ ಶಿವಸೇನಾ ನಾಯಕರ ಅಡ್ಡಿ, ಪಕ್ಷದಲ್ಲಿ ಯುವ ನಾಯಕರಿಗೆ ಹೆಚ್ಚಿನ ಮಣೆ ಹಾಕಿದ್ದೇ ಕಾರಣ ಎನ್ನಲಾಗುತ್ತಿದೆ.