Droupadi Murmu: ಸುಖೋಯ್‌ ಯುದ್ಧವಿಮಾನದಲ್ಲಿ ಸುಪ್ರೀಂ ಕಮಾಂಡರ್‌ ಹಾರಾಟ!

ಭಾರತೀಯ ಸೇನೆಯ ಸುಪ್ರೀಂ ಕಮಾಂಡರ್‌ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ, ಸುಖೋಯ್‌ 30 ಎಂಕೆಐ ಯುದ್ಧವಿಮಾನದ ಹಾರಾಟ ನಡೆಸಿದರು. ಅಸ್ಸಾಂನ ತೇಜ್‌ಪುರ್ ಏರ್‌ಪೋರ್ಸ್‌ ಸ್ಟೇಷನ್‌ನಲ್ಲಿ ಅವರು ಈ ಸಾಹಸ ಮಾಡಿದ್ದಾರೆ.

First Published Apr 8, 2023, 12:44 PM IST | Last Updated Apr 8, 2023, 12:44 PM IST

ನವದೆಹಲಿ (ಏ.8): ದೇಶದ ಮೂರೂ ಸೇನಾಪಡೆಯ ಸುಪ್ರೀಂ ಕಮಾಂಡರ್‌ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಎರಡು ದಿನಗಳ ಭೇಟಿಗಾಗಿ ಅಸ್ಸಾಂ ಪ್ರವಾಸದಲ್ಲಿದ್ದಾರೆ. ಶನಿವಾರ ಅವರು ತೇಜ್‌ಪುರ ಏರ್‌ಪೋರ್ಸ್‌ ಸ್ಟೇಷನ್‌ನಲ್ಲಿ ಸುಖೋಯ್‌ 30 ಎಂಕೆಐ ಯುದ್ಧವಿಮಾನ ಹಾರಾಟ ನಡೆಸಿದ್ದಾರೆ.

ಸುಖೋಯ್-30 ಎಂಕೆಐ ಟ್ವಿನ್-ಸೀಟರ್ ಮಲ್ಟಿರೋಲ್ ಫೈಟರ್ ಜೆಟ್ ಆಗಿದ್ದು, ಇದನ್ನು ರಷ್ಯಾದ ಸುಖೋಯ್ ಮತ್ತು ಭಾರತದ ಏರೋಸ್ಪೇಸ್ ದೈತ್ಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಪರವಾನಗಿ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಸುಧಾಮೂರ್ತಿ, ಎಸ್‌ಎಲ್ ಭೈರಪ್ಪ ಸೇರಿ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ಮುರ್ಮು!

ಇದಕ್ಕೂ ಮೊದಲು, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು 2009 ರಲ್ಲಿ ದೇಶದ ಮುಂಚೂಣಿಯ ಯುದ್ಧ ವಿಮಾನದ ಹಾರಾಟ ನಡೆಸಿದ್ದರ. ಏಪ್ರಿಲ್ 7 ರಂದು ರಾಷ್ಟ್ರಪತಿ ಮುರ್ಮು ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಗಜ್ ಉತ್ಸವ-2023 ಅನ್ನು ಉದ್ಘಾಟಿಸಿದ್ದಲ್ಲದೆ, ಗುವಾಹಟಿ ಹೈಕೋರ್ಟ್‌ನ 75 ನೇ ವರ್ಷದ ಸಂಭ್ರಮಾಚರಣೆಯ ಸಮಾರಂಭದಲ್ಲಿ ಭಾಗಿಯಾಗಿದ್ದರು.

Video Top Stories