ಸುಧಾಮೂರ್ತಿ, ಎಸ್‌ಎಲ್ ಭೈರಪ್ಪ ಸೇರಿ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ಮುರ್ಮು!

ಸುಧಾಮೂರ್ತಿ, ಎಸ್‌ಎಲ್ ಬೈರಪ್ಪ ಎಂಎಂ ಕೀರವಾಣಿ ಸೇರಿದಂತೆ 54 ಮಂದಿ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. 106 ಮಂದಿ ಪ್ರಶಸ್ತಿ ವಿಜೇತರ ಪೈಕಿ ಎರಡನೇ ಹಂತದಲ್ಲಿ 54 ಮಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
 

sudha murthy to mm keeravani President Droupadi Murmu Confers padma awards 2023 in Delhi ckm

ನವದೆಹಲಿ(ಏ.05): ಗಣರಾಜ್ಯೋತ್ಸವದಿಂದ ಘೋಷಿಸಲಾದ ಪದ್ಮ ಪ್ರಶಸ್ತಿ ಸಾಧಕರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಮಾರ್ಚ್ 22 ರಂದು ಮೊದಲ ಹಂತದಲ್ಲಿ 54 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಇಂದು ಇನ್ನುಳಿದ 54 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಕರ್ನಾಟಕದ ಹೆಮ್ಮೆಯ, ಇಸ್ಫೋಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಇಂದು ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಾಹಿತಿ, ಕನ್ನಡದ ಪ್ರಸಿದ್ಧ ಕಾದಂಬರಿಕಾರ ಎಸ್‌ಎಲ್ ಬೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉಮ್ಮತ್ತಾಟ್‌ ನೃತ್ಯ ಕಲಾವಿದೆ ಕೊಡಗಿನ ರಾಣಿ ಮಾಚಯ್ಯ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಸಿರಿ ಧಾನ್ಯ ಬಳಕೆ ಕುರಿತು ಪ್ರೋತ್ಸಾಹಿಸುತ್ತಿರುವ ವೈದ್ಯ ಡಾ ಖಾದರ್‌, ಬೀದರ್‌ನ ರಶೀದ್‌ ಅಹಮದ್‌ ಖಾತ್ರಿ  ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಕರ್ನಾಟಕ ಒಟ್ಟು 8 ಮಂದಿ ಪದ್ಮ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮೊದಲ ಹಂತದ ಪ್ರಶಸ್ತಿ ಪ್ರಧಾನದಲ್ಲಿ ಹಿರಿಯ ರಾಜಕಾರಣಿ ಎಂ.ಎಮ್ ಕೃಷ್ಣ ಪ್ರಶಸ್ತಿ ಸ್ವೀಕರಿಸಿದ್ದರು.

ಪದ್ಮ ಪ್ರಶಸ್ತಿ ಸ್ವೀಕರಿಸುವ ಮೊದಲು ಪ್ರಧಾನಿ ಮೋದಿ ಬಳಿ ತೆರಳಿ ಭಾವುಕರಾದ ಸಿದ್ದಿ ಮಹಿಳೆ ಹೀರಾಬಾಯಿ!

ಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಅವರಿಗೆ ಮರಣೋತ್ತರ ವಿಭೂಷಣ ಘೋಷಣೆ ಮಾಡಲಾಗಿತ್ತು. ಇಂದು ಮುಲಾಯಂ ಪುತ್ರ ಅಖಿಲೇಶ್ ಯಾದವ್ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದರು. ನಾಟು ನಾಟು ಹಾಡಿನ ಮೂಲಕ ಅದ್ಭುತ ಸಂಗೀತ ಸಾಮ್ರಾಜ್ಯ ಸೃಷ್ಟಿಸಿದ ಎಂಎಂ ಕೀರವಾಣಿ ಇಂದು ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದರು. 

 

 

ಮಾರ್ಚ್ 22 ರಂದು ಮೊದಲ ಹಂತದಲ್ಲಿ 54 ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.  ಗಣರಾಜ್ಯೋತ್ಸವದ ಮುನ್ನಾ ದಿನ ಕರ್ನಾಟಕದ 8 ಮಂದಿ ಸೇರಿ 106 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿತ್ತು. ಈ ಪೈಕಿ 54 ಜನರಿಗೆ ಮೊದಲ ಹಂತದಲ್ಲಿ ಪ್ರಶಸ್ತಿ ನೀಡಲಾಗಿತ್ತು. 

ಪತಿ ನಾರಾಯಣ ಮೂರ್ತಿ, ಮಗಳು ಮತ್ತು ಅಳಿಯ ರಿಷಿ ಸುನಕ್‌ಗೆ 4 ಅಂಶಗಳ ಸಲಹೆ ನೀಡಿದ ಸುಧಾಮೂರ್ತಿ..

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಹೆಸರಾಂತ ವಾಸ್ತುಶಿಲ್ತಿ ಬಾಲಕೃಷ್ಣ ದೋಷಿ (ಮರಣೋತ್ತರ)- ಪದ್ಮವಿಭೂಷಣ, ಹಿನ್ನೆಲೆ ಗಾಯಕಿ ಸುಮನ್‌ ಕಲ್ಯಾಣಪುರ್‌, ಉದ್ಯಮಿ ಕುಮಾರ ಮಂಗಳಂ ಬಿರ್ಲಾ, ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಕಪಿಲ್‌ ಕಪೂರ್‌, ಅಧ್ಯಾತ್ಮ ಗುರು ಕಮಲೇಶ್‌ ಡಿ.ಪಟೇಲ್‌ ಅವರಿಗೆ ಪದ್ಮಭೂಷಣ, ರಾಕೇಶ್‌ ಜುಂಜುನ್‌ವಾಲಾ (ಮರಣೋತ್ತರ) ಅವರಿಗೆ ಪದ್ಮಶ್ರೀ ಪ್ರದಾನ ಮಾಡಲಾಯಿತು. ವಯೋಸಹಜ ಕಾರಣ ಸುಮನ್‌ ಅವರು ನಡೆದಾಡಲು ಕಷ್ಟಪಡುತ್ತಿದ್ದ ಕಾರಣ ರಾಷ್ಟ್ರಪತಿ ಅವರು ತಾವು ನಿಂತಿದ್ದ ಸ್ಥಳದಿಂದ ಮುಂದೆ ಬಂದು ಗೌರವವನ್ನು ಪ್ರದಾನ ಮಾಡಿದರು.

Latest Videos
Follow Us:
Download App:
  • android
  • ios