ಪುರಾತನ ಸಿಟಿಯಲ್ಲಿ ಹಬ್ಬದ ಸಂಭ್ರಮ: 144 ವರ್ಷಗಳ ಬಳಿಕ ಮಹಾಕುಂಭಕ್ಕೆ ಸಜ್ಜಾದ ಪ್ರಯಾಗ್‌ರಾಜ್
ಮಹಾ ಕುಂಭಮೇಳದ ಹಿನ್ನೆಲೆ ಪ್ರಯಾಗ್ ರಾಜ್ ನಲ್ಲಿ ಹೊಸ ಸಿಟಿಯೊಂದು ನಿರ್ಮಾಣವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಪ್ರಯಾಗ್ ರಾಜ್ ಅನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಿಸಿದ್ದು ಇದರ ನಡುವೆ ನದಿ ತಟದಲ್ಲಿ ಟೆಂಟ್ ಸಿಟಿ ನಿರ್ಮಾಣವೂ ನಡೆದಿದೆ.
ಪ್ರಯಾಗ್‌ರಾಜ್(ಜ.12): ಐತಿಹಾಸಿಕ ಮಹಾ ಕುಂಭಮೇಳಕ್ಕೆ ಉತ್ತರಪ್ರದೇಶ ಸಜ್ಜಾಗಿದೆ. ಪ್ರಯಾಗ್ ರಾಜ್ ನ ಬೀದಿಗಳು ಕೋಟ್ಯಂತರ ಭಕ್ತರನ್ನು ಸ್ವಾಗತಿಸಲು ಬಣ್ಣ ಹಚ್ಚಿ ಕುಳಿತಿವೆ. ತ್ರಿವೇಣಿ ಸಂಗಮದ ಪುಣ್ಯ ಸ್ಥಾನಕ್ಕಾಗಿ ನಾಗಸಾಧುಗಳು, ಅಘೋರಿಗಳು ಪ್ರಯಾಗ್ ರಾಜ್ ನತ್ತ ಹೆಜ್ಜೆ ಹಾಕಿದ್ದಾರೆ. ಅಷ್ಟಕ್ಕೂ ಕುಂಭಮೇಳ ಅಂದ್ರೇನು..? ಯಾಕೆ ನಡೆಯುತ್ತೆ..? ಈ ಬಾರಿಯ ಕುಂಭಮೇಳದ ವಿಶೇಷತೆ ಏನು? ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಸಂಗಮ ತೀರದಿಂದ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್..ಇದೇ ಈ ಹೊತ್ತಿನ ವಿಶೇಷ 'ಶತಮಾನಗಳ ಮಹಾಕುಂಭ.
ಅಷ್ಟಕ್ಕೂ ಈ ಕುಂಭಮೇಳದ ಹಿನ್ನಲೆ ಏನು..? ಕುಂಭಮೇಳ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತೆ..? ಆ ಪುಣ್ಯ ಸ್ನಾನ ಮಾಡಿದ್ರೆ ಏನು ಲಾಭ?. 12 ವರ್ಷಕ್ಕೊಮ್ಮೆ ನಡೆಯುವ ಪೂರ್ಣ ಕುಂಭಮೇಳಕ್ಕೆ 700 ವರ್ಷದ ಇತಿಹಾಸವಿದೆ. ಪುರಾಣದ ಕಥೆಗಳ ಹಿನ್ನೆಲೆಯಿದೆ. ಕುಂಭಮೇಳದ ಆ ಪವಿತ್ರ ಸ್ನಾನ ಮಾಡಿದ್ರೆ ಪಾಪಗಳು ನಾಶ ಆಗುತ್ತೆ ಅನ್ನುವ ನಂಬಿಕೆ ಯಾಕೆ ಗೊತ್ತಾ..?
ಕಾಡ್ಗಿಚ್ಚಿನಿಂದ ನಟಿ ಪ್ರಿಯಾಂಕಾ ಮತ್ತು ನಟಿ ನೋರಾ ಜಸ್ಟ್ ಮಿಸ್; ಶೂಟಿಂಗ್ ಸ್ಟುಡಿಯೋಗಳೆಲ್ಲಾ
ಕುಂಭಮೇಳಕ್ಕೆ ಆಗಮಿಸುವ ಕೋಟ್ಯಂತರ ಭಕ್ತರಿಗೆ ನದಿ ತೀರದಲ್ಲಿ ತಂಗಲು ಅಲ್ಲೊಂದು ಸಿಟಿಯೇ ನಿರ್ಮಾಣವಾಗಿದೆ. ಹೇಗಿದೆ ಗೊತ್ತಾ ಆ ಸಿಟಿ..? ಆ ಸಿಟಿಯ ವಿಶೇಷತೆಗಳೇನು?.
ಮಹಾ ಕುಂಭಮೇಳದ ಹಿನ್ನೆಲೆ ಪ್ರಯಾಗ್ ರಾಜ್ ನಲ್ಲಿ ಹೊಸ ಸಿಟಿಯೊಂದು ನಿರ್ಮಾಣವಾಗಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಪ್ರಯಾಗ್ ರಾಜ್ ಅನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಿಸಿದ್ದು ಇದರ ನಡುವೆ ನದಿ ತಟದಲ್ಲಿ ಟೆಂಟ್ ಸಿಟಿ ನಿರ್ಮಾಣವೂ ನಡೆದಿದೆ. ಅಷ್ಟಕ್ಕೂ ಟೆಂಟ್ ಸಿಟಿ ಅಂದ್ರೇನು? ಅಲ್ಲಿರುವ ವ್ಯವಸ್ಥೆಗಳು ಏನೇನು? ಇಲ್ಲಿದೆ ಡೀಟೇಲ್ಸ್.