ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ, 5 ಕಾರ್ಯಕ್ರಮ, ಹಲವು ಮಾರ್ಗಸಂಚಾರ ಬದಲು

ಮೋದಿ ಆಗಮನಕ್ಕೆ ಭರ್ಜರಿ ತಯಾರಿ, 5 ಕಾರ್ಯಕ್ರಮ, ಗುಜರಾತ್‌ನ 160 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಚಾರ್ಜ್‌ಶೀಟ್‌ನಲ್ಲಿ ಮುರುಘಾ ಶರಣದ ಕಾಮ ಕಳ್ಳಾಟ ಬಯಲು ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

Share this Video
  • FB
  • Linkdin
  • Whatsapp

ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೆಂಪೇಗೌಡರ ಪ್ರತಿಮೆ ಅನಾವರಣ , ವಂದೇ ಭಾರತ್ ರೈಲಿಗೆ ಚಾಲನೆ ಸೇರಿದಂತೆ 5 ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರಗೆ ಮೋದಿ ಬೆಂಗಳೂರಿನಲ್ಲಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೆಹಲಿಗೆವಾಪಸ್ ಆಗಲಿದ್ದಾರೆ. ಪ್ರಧಾನಿ ಮೋದಿ ಹೆಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಬೆಂಗಳೂರಿನ ಮಾರ್ಗದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮೋದಿ ಸ್ವಾಗತಕ್ಕೆ ಬಿಜೆಪಿ ರೆಡಿಯಾಗಿದೆ. ಆದರೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಇದು ಚುನಾವಣೆ ಗಿಮಿಕ್ ಎಂದಿದೆ. ಮೋದಿ ಬರುತ್ತಿದ್ದಾರ ಎಂದು ರಸ್ತೆ ಗುಂಡಿ ಮುಚ್ಚಲಾಗಿದೆ. ಆದರೆ ಕಾಮಾಗಾರಿ ಕಳಪೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ನಾಳೆ ಪ್ರಧಾನಿ ಮೋದಿ ಕಾರ್ಯಕ್ರಮ, ಸಂಚಾರ ಮಾರ್ಗ, ಬಿಜೆಪಿ ಸಮಾವೇಷ, ಮೋದಿ ಭಾಷಣ ಸೇರಿದಂತೆ ಎಲ್ಲಾ ವಿವರ ಇಲ್ಲಿದೆ.

Related Video