Russia Ukraine Crisis ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿಗಳೊಂದಿಗೆ ಮೋದಿ ಮಾತು!

ಯುದ್ಧಪೀಡಿತ ಉಕ್ರೇನ್ ದೇಶದಿಂದ ಮರಿದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ
ಭಾರತಕ್ಕೆ ಮರಳುವ ಆಸೆಯನ್ನೇ ಕೈಬಿಟ್ಟಿದ್ದೆವು, ಸರ್ಕಾರಕ್ಕೆ ಧನ್ಯವಾದ ಎಂದ ವಿದ್ಯಾರ್ಥಿಗಳು

First Published Mar 3, 2022, 8:26 PM IST | Last Updated Mar 3, 2022, 8:27 PM IST

ವಾರಣಾಸಿ (ಮಾ. 3): ಯುದ್ಧಪೀಡಿತ ಉಕ್ರೇನ್ (War torn Ukraine) ದೇಶದಿಂದ ಮರಳಿದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi,) ಗುರುವಾರ ವಾರಣಾಸಿಯಲ್ಲಿ ಮಾತುಕತೆ ನಡೆಸಿದರು. ಈ ವೇಳೆ ರಕ್ಷಣಾ ಕಾರ್ಯಾಚರಣೆಯ ಕುರಿತಾಗಿ ಮೋದಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಂದಾಜು 20 ಸಾವಿರಕ್ಕೂ ಅಧಿಕ ಭಾರತೀಯರು ಉಕ್ರೇನ್ ನ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು, ವೈದ್ಯಕೀಯ ಅಭ್ಯಾಸ ಮಾಡುವವರಾಗಿದ್ದಾರೆ. ಯುದ್ಧ ಆರಂಭವಾದ ಬಳಿಕ ಆದ ಮಾನಸಿಕ ಹಿಂಸೆಗಳು ಹಾಗೂ ಆತಂಕದ ಬಗ್ಗೆ ವಿದ್ಯಾರ್ಥಿಗಳು ಪ್ರಧಾನಿಗೆ ಮಾಹಿತಿ ನೀಡಿದರು. 

ಭಾರತಕ್ಕೆ ಮರಳುವ ಆಸೆಯನ್ನೇ ಕೈಬಿಟ್ಟಿದ್ದೆವು. ಈ ವೇಳೆ ಸರ್ಕಾರ ಸಹಾಯಕ್ಕೆ ಧಾವಿಸಿತು ಎಂದು ವಿದ್ಯಾರ್ಥಿಗಳು ತಿಳಿಸಿದರು. ಮಾರ್ಚ್ 2 ರಂದು ಭಾರತಕ್ಕೆ ಮರಳುವ ವಿಮಾನವನ್ನು ಬುಕ್ ಮಾಡಿದ್ದೆವು. ಅದಕ್ಕೂ ಮುನ್ನವೇ ಯುದ್ಧ ಆರಂಭವಾಗಿತ್ತು. ಆದರೆ, ಭಾರತದ ರಾಯಭಾರ ಕಚೇರಿ (Indian Embassy) ಹಾಗೂ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬಂದಿತು ಎಂದು ವಿದ್ಯಾರ್ಥಿನಿಯೊಬ್ಬರು ಈ ವೇಳೆ ಹೇಳಿದರು.

Asianet Suvarna Focus ತನ್ನ ಕುಟುಂಬವನ್ನ ಬಚ್ಚಿಟ್ಟ ಪುಟಿನ್, ಸ್ಫೋಟಕ ರಹಸ್ಯ ಬಿಚ್ಚಿಟ್ಟ ರಷ್ಯಾ ಪ್ರೊಫೆಸರ್
ಉಕ್ರೇನ್ ಗಡಿಯನ್ನು ದಾಟಿದ ಬಳಿಕ ಭಾರತದ ರಾಯಭಾರ ಕಚೇರಿ ಸುರಕ್ಷಿತವಾಗಿ ನಮ್ಮನ್ನು ದೇಶಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿತು. ಆ ದೇಶದಲ್ಲಿ ಇನ್ನೂ ಸಿಲುಕಿಕೊಂಡಿರುವ ಭಾರತೀಯರನ್ನು ಯಶಸ್ವಿಯಾಗಿ ಭಾರತಕ್ಕೆ ವಾಪಸ್ ಕರೆತರುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.