Asianet Suvarna News Asianet Suvarna News

ಮೋದಿ ಕೊರೊನಾ ವಾರ್ನಿಂಗ್: ಕೋವಿಡ್ 4ನೇ ಅಲೆ ತಡೆಯಲು ಪ್ರಧಾನಿ 3T ಸೂತ್ರ!

 ದೇಶದ ಕೆಲ ರಾಜ್ಯಗಳಲ್ಲಿ ಮತ್ತೆ ಕೋವಿಡ್‌ ಸೋಂಕಿನ (Covid 19)  ಪ್ರಮಾಣ ಏರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ‘ದೇಶದಲ್ಲಿ ಇನ್ನೂ ಕೋವಿಡ್‌ ಆತಂಕ ದೂರವಾಗಿಲ್ಲ. ಹೀಗಾಗಿ ನಾವು ಎಚ್ಚರವಾಗಿರಬೇಕು’ ಎಂದು ಕರೆ ಕೊಟ್ಟಿದ್ದಾರೆ.

ಕಾಂಗ್ರೆಸ್ ಸೇರಲು ತಂತ್ರಗಾರ ಪ್ರಶಾಂತ್ ಕಿಶೋರ್ ನಿರಾಕರಿಸಿದ್ದೇಕೆ..?

ಅಲ್ಲದೆ, ಮಕ್ಕಳ ಲಸಿಕಾಕರಣಕ್ಕೆ (Vaccination) ಒತ್ತು ನೀಡುವುದು ಸೇರಿದಂತೆ ಐದು ಸೂತ್ರಗಳನ್ನು ಅವರು ಪಠಿಸಿದ್ದು, ಈ ಸೂತ್ರಗಳ ಪಾಲನೆ ಮೂಲಕ ಆರಂಭಿಕ ಹಂತದಲ್ಲೇ ಕೋವಿಡ್‌ 4ನೇ ಅಲೆಯನ್ನು (4th Wave) ನಿಯಂತ್ರಿಸುವ ಮಾರ್ಗೋಪಾಯಗಳನ್ನು ನೀಡಿದ್ದಾರೆ.

ಇತರೆ ಕ್ರಮಗಳ ಜೊತೆಗೆ ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ (ಟೆಸ್ಟ್‌, ಟ್ರ್ಯಾಕ್‌, ಟ್ರೀಟ್‌) ಎಂಬ 3ಟಿ ಸೂತ್ರಗಳನ್ನು ನಾವು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಾಮಾಜಿಕ ಅಂತರ ಪಾಲನೆ, ಮಾಸ್‌್ಕ ಧಾರಣೆಯಂಥ ಕೋವಿಡ್‌ ಸನ್ನಡತೆಗಳನ್ನು ಮರೆಯಬಾರದು. ಆದರೆ ಆತಂಕ ಪಡಬಾರದು. ಒಮಿಕ್ರೋನ್‌ ಅಲೆಯನ್ನು ನಾವು ಇಚ್ಛಾಶಕ್ತಿಯ ಮೂಲಕ ಯಾವುದೇ ಆತಂಕ ಇಲ್ಲದೆಯೇ ಎದುರಿಸಿದೆವು. ಈ ರೀತಿಯ ಸ್ಫೂರ್ತಿ ಈ ಸಲವೂ ಮುಂದುವರಿಯಬೇಕು ಎಂದು ಕರೆಯಿತ್ತರು.

Video Top Stories