ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್‌ ಸುರಂಗ ಮಾರ್ಗ ಲೋಕಾರ್ಪಣೆ: ವಿಶೇಷತೆಗಳಿವು

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಹಿರಿಮೆ ಹೊಂದಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ 9.02 ಕಿ.ಮೀ. ಉದ್ದದ ಮನಾಲಿ- ಲೇಹ್‌ ನಡುವಣ ರಸ್ತೆ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆ ಮಾಡಿದ್ದಾರೆ. 

First Published Oct 3, 2020, 12:06 PM IST | Last Updated Oct 3, 2020, 12:17 PM IST

ನವದೆಹಲಿ (ಅ. 03): ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಹಿರಿಮೆ ಹೊಂದಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ 9.02 ಕಿ.ಮೀ. ಉದ್ದದ ಮನಾಲಿ- ಲೇಹ್‌ ನಡುವಣ ರಸ್ತೆ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆ ಮಾಡಿದ್ದಾರೆ. 

10000 ಅಡಿ ಎತ್ತರದಲ್ಲಿರುವ ವಿಶ್ವದ ಉದ್ದದ ಸುರಂಗ ಇಂದು ಲೋಕಾರ್ಪಣೆ

ಅಟಲ್ ಸುರಂಗ ಮಾರ್ಗದ ವಿಶೇಷತೆಯನ್ನು ನೋಡುವುದಾದರೆ, ಇದು 9.02 ಕಿ.ಮೀ. ಉದ್ದ ಕುದುರೆ ಲಾಳಾಕೃತಿಯಲ್ಲಿದೆ. ದ್ವಿಪಥವನ್ನು ಹೊಂದಿದೆ. 8 ಮೀಟರ್‌ ಅಗಲದ ರಸ್ತೆ ಇದೆ. 5.525 ಮೀ. ಎತ್ತರದ ವಾಹನ ಚಲಿಸಬಹುದು. ನಿತ್ಯ 3000 ಕಾರು, 1500 ಲಾರಿಗಳ ಸಂಚರಿಸಬಹುದು. ಇದು ಸರ್ವಋತು ಸುರಂಗ ಮಾರ್ಗವಾಗಿದೆ.  ಮನಾಲಿ- ಲೇಹ್‌ ನಡುವಣ ದೂರ 46 ಕಿ.ಮೀ. ಇಳಿಕೆಯಾಗಲಿದ್ದು, ಎರಡೂ ನಗರಗಳ ಪ್ರಯಾಣ ಅವಧಿ 4ರಿಂದ 5 ತಾಸಿನಷ್ಟುಉಳಿತಾಯವಾಗಲಿದೆ.