Kisan Drones: ಕೃಷಿ ಕೆಲಸಕ್ಕೂ ಡ್ರೋನ್, 100 ಕಿಸಾನ್‌ ಡ್ರೋನ್‌ಗೆ ಪ್ರಧಾನಿ ಮೋದಿ ಚಾಲನೆ

ನಮ್ಮ ರೈತರಿಗೆ ನೆರವಾಗಲೆಂದು ಪ್ರಧಾನಿ ಮೋದಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ರೈತಾಪಿ ವರ್ಗಕ್ಕೆ ಅನುಕೂಲವಾಗಲೆಂದು 100 ಕಿಸಾನ್ ಡ್ರೋನ್‌ಗಳಿಗೆ ಚಾಲನೆ ನೀಡಿದರು. ಬೆಳೆಗಳಿಗೆ ಕೀಟನಾಶಕ ಸಿಂಪಡಣೆ, ಬೇರೆ ಬೇರೆ ಕೆಲಸಗಳಿಗೆ ನೆರವಾಗಲಿದೆ.

First Published Feb 19, 2022, 10:11 AM IST | Last Updated Feb 19, 2022, 10:11 AM IST

ನವದೆಹಲಿ (ಫೆ. 19): ನಮ್ಮ ರೈತರಿಗೆ ನೆರವಾಗಲೆಂದು ಪ್ರಧಾನಿ ಮೋದಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ರೈತಾಪಿ ವರ್ಗಕ್ಕೆ ಅನುಕೂಲವಾಗಲೆಂದು 100 ಕಿಸಾನ್ ಡ್ರೋನ್‌ಗಳಿಗೆ ಚಾಲನೆ ನೀಡಿದರು. ಬೆಳೆಗಳಿಗೆ ಕೀಟನಾಶಕ ಸಿಂಪಡಣೆ, ಬೇರೆ ಬೇರೆ ಕೆಲಸಗಳಿಗೆ ನೆರವಾಗಲಿದೆ.

ಪಂಜಾಬ್, ಗೋವಾದಲ್ಲಿ, ಉತ್ತರ ಪ್ರದೇಶ, ರಾಜಸ್ತಾನ, ತೆಲಂಗಾಣದಲ್ಲಿ ಡ್ರೋಣ್ ಕಾರ್ಯಾಚರಣೆ ನಡೆಸಲಿದೆ. 'ಪ್ರಸ್ತುತ ಡ್ರೋನ್‌ನ್ನು ನಾವು ಸಾಕಷ್ಟು ಕೆಲಸಗಳಿಗೆ ಬಳಸುತ್ತಿದ್ದೇವೆ. ಕಿಸಾನ್ ಡ್ರೋನ್ ಹೊಸ ಇತಿಹಾಸವನ್ನು ಬರೆಯಲಿದೆ. ರೈತರಿಗೆ ವಿಶೇಷ ಉಪಯೋಗವಾಗಲಿದೆ' ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.