PM Modi Isro Visit: ಇಸ್ರೋ ಅಧ್ಯಕ್ಷ ಸೋಮನಾಥ್‌ ಬೆನ್ನುತಟ್ಟಿ ಸಂಭ್ರಮಿಸಿದ ಮೋದಿ

ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಬೆನ್ನು ತಟ್ಟಿ ಅಭಿನಂದಿಸಿದರು.
 

Share this Video
  • FB
  • Linkdin
  • Whatsapp

ಕಳೆದ ಮೂರು ದಿನಗಳಿಂದ ವಿದೇಶ ಪ್ರವಾಸ, ಅದರ ನಡುವೆ ಚಂದ್ರಯಾನದ ಯಶಸ್ಸಿನ ಸಂಭ್ರಮ ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ(Narendra Modi) ಶನಿವಾರ ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಖುದ್ದು ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ. ಇಸ್ರೋ ವಿಜ್ಞಾನಿಗಳನ್ನು ಬೆನ್ನುತಟ್ಟಿ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಅಲ್ಲದೇ ವಿಜ್ಞಾನಿಗಳ ಸಾಧನೆ ಬಣ್ಣಿಸುತ್ತ ಭಾವುಕರಾಗಿದ್ದಾರೆ. ಮೋದಿಗೆ ವಿಕ್ರಮ್ ಲ್ಯಾಂಡರ್ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರೋವರ್ ಸೆರೆಹಿಡಿದ ಚಂದ್ರನ(Moon) ಫೋಟೋವನ್ನೂ ಮೋದಿಗೆ ಗಿಫ್ಟ್ ನೀಡಲಾಯಿತು. ಇಸ್ರೋ ಕೇಂದ್ರಕ್ಕೆ ಬಂದವರೆ, ಅಧ್ಯಕ್ಷ ಸೋಮನಾಥ್‌(S.Somanath) ಅವರ ಬೆನ್ನುತಟ್ಟಿ ಮೋದಿ ಸಂಭ್ರಮಿಸಿದರು.ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೂಗುಚ್ಛ ನೀಡಿ ಸ್ವಾಗತ ಮಾಡಿದರು. ಈ ವೇಳೆ ಇತರ ವಿಜ್ಞಾನಿಗಳು ಜೊತೆಗಿದ್ದರು.

ಇದನ್ನೂ ವೀಕ್ಷಿಸಿ: ನಟಿ ಹರ್ಷಿಕಾ-ಭುವನ್‌ ಮದುವೆಗೆ ಯಾರ್ಯಾರು ಬಂದಿದ್ರು ಗೊತ್ತಾ? ವಿವಾಹದ ವಿಡಿಯೋ ವೈರಲ್‌

Related Video